ನನಗಾಗಿ ಜನುಮ ಪಡೆದ ಹೃದಯ ರಾಮು
ಇಂದು ದೇವರ ಹುಟ್ಟುಹಬ್ಬ, ಸ್ವರ್ಗವೆಲ್ಲ ನಿಮ್ಮದಾಗಲಿರೀ,
ಬೆಂಗಳೂರು; ಪತಿ ರಾಮು ಹುಟ್ಟುಹಬ್ಬಕ್ಕೆ ನಟಿ ಮಾಲಾಶ್ರೀ ಭಾವನಾತ್ಮಕ ಪತ್ರ ಬರೆದುಕೊಂಡು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಾಲಾಶ್ರೀ ಪತ್ರ:
Happy Birthday My Soul
ನೀವು ನನಗೆ ದೇವರ ವರವಾಗಿ ಬಂದಿರಿ. ನೀವು ನನಗೆ ವರಗಳನ್ನು ಕೊಡುವ ದೇವರಾದ್ರಿ. ಈ ದಿನ ದೇವರ ಹುಟ್ಟುಹಬ್ಬ. 23 ವರ್ಷಗಳ ಕಾಲ ಈ ನಿಮ್ಮ ಹುಟ್ಟುಹಬ್ಬವನ್ನು ನನ್ನ ಹುಟ್ಟುಹಬ್ಬವನ್ನಾಗಿ ಆಚರಿಸಿ ನನ್ನ ಉಸಿರಿನಲ್ಲಿ ಉಸಿರಾಗ್ತಾ ಬಂದ್ರಿ.

ನನ್ನ ದಿನ ನೀವಾಗಿದ್ರಿ ನನ್ನ ನುಡಿ ನಗು, ನೆಮ್ಮದಿ ನೀವಾಗಿದ್ರೀ, ನನ್ನ ಹೆಸರಿಗೆ ಬೆಳಕಾಗಿದ್ರಿ. ದಿನ ರಾತ್ರಿ ನನ್ನ ಆಗುಹೋಗಗಳನ್ನು ಆಲಿಸಿ, ನನಗೆ ಬುದ್ಧಿ ಹೇಳಿ ಬದುಕು ಬುನಾದಿ ಕಟ್ಟಿ ಕೊಟ್ಟ ಗುರುಗಳಾದ್ರಿ. ಮಕ್ಕಳ ಬದುಕನ್ನು ಅವರ ಜೀವನವನ್ನು ಹಸನರಾಗಿ ರೂಪಿಸಿದ Perfect Father ಆಗಿದ್ರಿ.
You were a man of different dimensions, a devoted caring, dedicated determined and wise soul
ನೀವೂ ದೂರವಾದ ಆ ಕ್ಷಣದಿಂದ ಈ ಸಾಲುಗಳನ್ನು ಬರೆಯುತ್ತಿರುವ ಈ ಕ್ಷಣದಲ್ಲೂ ಕಣ್ಣಲ್ಲಿ ನೀರು ಹೆಪ್ಪುಗಟ್ಟಿ ಕಣ್ಣೆರಡು ಮಂಜಾಗ್ತಾನೆ ಇದೆ. I am missing you som much
— Malashree Ramu (@RamuMalashree) June 20, 2021
ನನಗಾಗೆ ಜನುಮ ಪಡೆದು ಬಂದ ನನ್ನ ಹೃದಯ ನೀವು. ನನಗೆ ಏನೇನು ಬೇಕೋ ಅದೆಲ್ಲ ಕೊಟ್ಟ ನಿಮಗೆ ಆ ಇಡೀ ಸ್ವರ್ಗ ನಿಮ್ಮದಾಗಿರಲಿ ಅಂತ ಇವತ್ತು ಇಲ್ಲಿಂದಲೇಮ ಹಾರೈಕೆ ಮಾಡ್ತೀನಿರಿ.
We miss yu and love you forever