ಬೆಂಗಳೂರು: ನಟಿ ಸುಧಾರಾಣಿ ತಮ್ಮ ಮೊದಲ ಸಿನಿಮಾ ಆನಂದ್ ತೆರೆಕಂಡ ದಿನವನ್ನು ನೆನಪಿಸಿಕೊಂಡಿದ್ದು, ಚಿತ್ರದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ದೊಡ್ಮನೆಯ ಕುಡಿ ಶಿವರಾಜ್ ಕುಮಾರ್ ಅವರಿಗೂ ಇದು ಮೊದಲ ಚಿತ್ರವಾಗಿತ್ತು.
1986 ಜೂನ್ 19 ನನ್ನ ಜೀವನದ ಪ್ರಮುಖ ದಿನ. ನನ್ನ ಮೊದಲ ಚಿತ್ರ ಆನಂದ್ ಬಿಡುಗಡೆಗೊಂಡು 35 ವರ್ಷವಾಯ್ತು. ಇದಕ್ಕೆ ಕಾರಣ ನೀವೆಲ್ಲರೂ. ಚಿತ್ರೀಕರಣ ಆರಂಭದ ಮೊದಲ ದಿನದಿಂದ ಶತಕ ಸಂಭ್ರಾಮಚರಣೆಯ ಫೊಟೋಗಳನ್ನ ನಿಮ್ಮ ಶೇರ್ ಮಾಡಿಕೊಳ್ಳುತ್ತಿದ್ದೇನೆ ಎಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.

ಶಿವರಾಜ್‍ಕುಮಾರ್ ಜೊತೆಗಿನ ಫೋಟೋಶೂಟ್, ಶೂಟಿಂಗ್ ಪಟಗಳು. ಶತದಿನೋತ್ಸವ ಸಂಭ್ರಮದ ಪೋಸ್ಟರ್, ಆಹ್ವಾನ ಪತ್ರಿಕೆ ಹಾಗೂ ಸೋಲೋ ಫೋಟೋಶೂಟ್ ಮುಂತಾದ್ದನ್ನು ಸುಧಾರಾಣಿ ಈಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.