ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೊದಲ ಮಡದಿ ಅಮೃತಾ ಸಿಂಗ್ ಪುತ್ರಿಯೇ ಸಾರಾ ಅಲಿ ಖಾನ್. 1995ರಲ್ಲಿ ಜನಸಿದ ಸಾರಾ, ಕೇದಾರನಾಥ್ ಸಿನಿಮಾದಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟು, ಸದ್ಯ ಸಾಲು ಸಾಲು ಸಿನಿಮಾಗಲ್ಲಿ ಬ್ಯುಸಿಯಾಗಿರುವ ಯುವ ಕಲಾವಿದೆ.

ಮೊದಲ ಚಿತ್ರ ಕೇದಾರನಾಥ್ ದಲ್ಲಿ ನಟನೆಗಾಗಿ ಫಿಲ್‍ಂ ಫೇರ್ ಉತ್ತಮ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. 2019ರ 100 ಸೆಲೆಬ್ರಿಟಿಗಳ ಫೋಬ್ರ್ಸ್ ಪಟ್ಟಿಯಲ್ಲಿಯೂ ಮಿಂಚಿದರು.

ಇನ್ನು ಸಾರಾ ಅಲಿ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಸೋದರ ಇಬ್ರಾಹಿಂ ಜೊತೆ ಬಿಕಿನಿಯಲ್ಲಿ ಕ್ಲಿಕ್ಕಿಸಿಕೊಳ್ಳುವ ಫೋಟೋಗಳು ಹೆಚ್ಚು ಟ್ರೋಲ್ ಆಗುತ್ತವೆ.

ಸಾರಾ ಅಲಿ ಖಾನ್‍ಗೆ ಐಶ್ವರ್ಯಾ ರೈ ಬಚ್ಚನ್ ಮೆಚ್ಚಿನ ನಟಿ. ಚಿಕಾಗೋದಲ್ಲಿ ಐಶ್ವರ್ಯಾ ನೀಡಿದ್ದ ಪ್ರದರ್ಶನ ಸಾರಾ ಮೇಲೆ ಹೆಚ್ಚು ಪ್ರಭಾವ ಬೀರಿತ್ತು ಎಂದು ಸೈಫ್ ಅಲಿ ಖಾನ್ ಹೇಳಿದ್ದರು. ತದನಂತರ ತೂಕ ಇಳಿಸಿ ಬಣ್ಣದ ಲೋಕಕ್ಕೆ ಸಾರಾ ಎಂಟ್ರಿ ಕೊಟ್ಟಿದ್ದರು.

ಕೇದಾರನಾಥ್ ಬಳಿಕ ರೋಹಿತ್ ಶೆಟ್ಟಿ ನಿರ್ದೇಶನದ ಸಿಂಬಾ ಚಿತ್ರದಲ್ಲಿ ರಣ್‍ವೀರ್ ಗೆ ನಾಯಕಿಯಾಗಿ ತೆರೆ ಹಂಚಿಕೊಂಡರು. 2018ರಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾಗಳಲ್ಲಿ ಸಿಂಬಾ ಸಹ ಒಂದಾಗಿದೆ. ನಂತರ ಕೂಲಿ ನಂಬರ್-1ರಲ್ಲಿ ನಟಿಸಿದ್ದಾರೆ.

ಲವ್ ಆಜ್ ಕಲ್, ಅತರಂಗಿ ರೇ ಸಿನಿಮಾಗಳು ಸಾರಾ ಕೈಯಲ್ಲಿವೆ. ಇನ್ನು ವಿಕ್ಕಿ ಕೌಶಲ್ ಜೊತೆಗಿನ ಸಿನಿಮಾಗೂ ಸಾರಾ ಸಹಿ ಹಾಕಿದ್ದು, ಚಿತ್ರದ ಟೈಟಲ್ ಅನೌನ್ಸ್ ಆಗಿಲ್ಲ.
