ಬೆಂಗಳೂರಿನ ಭಯಾನಕ ಜೋಡಿಯ ಬೆಚ್ಚಿಬೀಳಿಸೋ ಕಥೆ
ಬೆಂಗಳೂರು: ಮಹಿಳೆಯರ ಅಶ್ಲೀಲ ಫೋಟೋಗಳನ್ನು ಕ್ಲಿಕ್ಕಿಸಿ ಹಣ ಪೀಕುತ್ತಿದ್ದ ಜೋಡಿಯ ವಿರುದ್ಧ ದೂರು ದಾಖಲಾಗಿದೆ.
ಕಾವ್ಯಾ ಮತ್ತು ಕೃಷ್ಣ ಜೋಡಿಯ ವಿರುದ್ಧ ದೂರು ದಾಖಲಾಗಿದೆ. ಇವರಿಬ್ಬರ ಭಯಾನಕ ಐಡಿಯಾ ಕೇಳಿದ್ರೆ ನೀವು ಬೆಚ್ಚಿಬೀಳುತ್ತೀರಿ. ಕಾವ್ಯಾ ಮತ್ತು ಕೃಷ್ಣ ಇಬ್ಬರು ಬೆಂಗಳೂರಿನ ಚಂದ್ರಾಲೇಔಟ್ ನಿವಾಸಿಗಳು. ಕೃಷ್ಣನ ಪತ್ನಿ ಕಾವ್ಯಾ ಫೇಸ್‍ಬುಕ್ ಸೇರಿದಂತೆ ಇತರೆ ಸೋಶಿಯಲ್ ಮಿಡಿಯಾದ ಮೂಲಕ ಸುಂದರ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು.
ಸೋಶಿಯಲ್ ಮೀಡಿಯಾದಲ್ಲಿ ಭೇಟಿಯಾಗುವ ಯುವತಿಯರ ಜೊತೆ ಸ್ನೇಹ ಸಂಪಾದಿಸುತ್ತಿದ್ದಳು. ಮನೆಯಲ್ಲಿ ಹಬ್ಬದ ನಿಮಿತ್ ವಿಶೇಷ ಪೂಜೆ ಮಾಡುತ್ತಿರೋದಾಗಿ ಹೇಳಿ ಯವತಿಯರನ್ನು ಕರೆಸಿಕೊಳ್ಳುತ್ತಿದ್ದಳು. ಮನೆಗೆ ಬರುವ ಯುವತಿಯರಿಗೆ ಮನೆಗೆ ಬರುವ ಯುವತಿಯರಿಗೆ ಮತ್ತು ಬರುವ ಔವಧಿ ಮಿಶ್ರಿತ ಜ್ಯೂಸ್ ಕುಡಿಸುತ್ತಿದ್ದಳು. ತದನಂತರ ಕೃಷ್ಣ ಆವರ ಬಟ್ಟೆ ಬಿಚ್ಚಿ ಯುವತಿಯರ ಜೊತೆ ಅಶ್ಲೀಲ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಿದ್ದನು.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಜನವರಿಯಲ್ಲಿ ತನ್ನದೇ ಏರಿಯಾದ ಯುವತಿಯನ್ನು ಕಾವ್ಯಾ ಪರಿಚಯ ಮಾಡಿಕೊಂಡಿದ್ದಾಳೆ. ಹಬ್ಬಕ್ಕೆಂದು ಮನೆಗೆ ಕರೆಸಿಕೊಂಡಿದ್ದಾಳೆ. ಈ ವೇಳೆ ಮನೆಯಲ್ಲಿ ಕೃಷ್ಣ ಹಾಗೂ ಆತನ ಗೆಳೆಯ ಸಾಗರ್ ಮನೆಯಲ್ಲಿದ್ದರು.
ಪ್ಲಾನ್ ನಂತೆ ಯುವತಿಗೆ ಮತ್ತು ಬರೋ ಔಷಧಿ ಮಿಶ್ರಿತ ಜ್ಯೂಸ್ ಕುಡಿಸಿದ್ದಾಳೆ. ಆಗ ಯುವತಿಯನ್ನು ವಿವಸ್ತ್ರಗೊಳಿಸಿ, ಆಕೆಯ ಕೃಷ್ಣ ಪೋಸ್ ನೀಡಿದ್ರೆ ಸಾಗರ್ ಫೋಟೋ ಕ್ಲಿಕ್ ಮಾಡಿದ್ದಾನೆ. ನಂತರ ಆಕೆಯ ಬಳಿಯಲ್ಲಿದ್ದ ಎಟಿಎಂ ಕಾರ್ಡ್, ಚಿನ್ನದುಂಗರ, ಹಣ ಕಸಿದುಕೊಂಡಿದ್ದಾರೆ.
ನಂತದ ಫೋಟೋಗಳನ್ನು ಯುವತಿಗೆ ಕಳಿಸಿ ಹಣ ನೀಡುವಂತೆ ಪೀಡಿಸಿದ್ದಾರೆ. ಯುವತಿ ಬಳಿ ಸುಮಾರು ನಾಲ್ಕು ಲಕ್ಷ ರೂ . ಪಡೆದುಕೊಂಡಿದ್ದಾರೆ. ನೀಚರು ಮತ್ತೆ ಹಣಕ್ಕೆ ಪೀಡಿಸಿದಾಗ ಯುವತಿ ಕೊನೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.