ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಯುವಕರಿಂದ ಪ್ರತಿಭಟನೆ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಳಿಕ ಪಕ್ಷ ಬದಲಾವಣೆ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದ ನಾಯಕರು ಮತ್ತೆ ಟಿಎಂಟಿ ಸೇರ್ಪಡೆಯಾಗುತ್ತಿದ್ದಾರೆ.
ಬಂಗಾಳದ ಬೀರಭೂಮಿ ಜಿಲ್ಲೆಯಲ್ಲಿ ಸುಮಾರು 350 ಬಿಜೆಪಿ ಕಾರ್ಯಕರ್ತರು ಸಾಮೂಹಿಕವಾಗಿ ಟಿಎಂಸಿ ಸೇರ್ಪಡೆಗೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲ ಕಾರ್ಯಕರ್ತರಿಗೆ ಗಂಗಾಜಲ ಸಿಂಪಡಿಸಿ ಪಕ್ಷಕ್ಕೆ ಬರಮಾಡಿಕೊಂಡಿದೆ. ಹೀಗಾಗಿ ಈ ಕಾರ್ಯಕ್ರಮ ಬರೋಬ್ಬರಿ ನಾಲ್ಕು ಗಂಟೆ ನಡೆದಿದೆ. ಪ್ರತಿ ಕಾರ್ಯಕರ್ತನಿಗೂ ಪ್ರತ್ಯೇಕವಾಗಿಯೇ ಗಂಗಾಜಲ ಸಿಂಪಡನೆ ಮಾಡಲಾಗಿತ್ತು.
ಟಿಎಂಸಿ ಸೇರ್ಪಡೆಗಾಗಿ ಪ್ರತಿಭಟನೆ: ಇನ್ನು ಈ ಎಲ್ಲ ಯುವಕರು ತಮ್ಮನ್ನು ಮತ್ತೊಮ್ಮೆ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಪ್ರತಿಭಟನೆ ನಡೆಸಿದ್ದರು. ಬಿಜೆಪಿ ಸೇರಿದ್ದು ತಪ್ಪಾಗಿದೆ ಎಂಬ ಬರಹವುಳ್ಳು ಭಿತ್ತಪತ್ರಗಳನ್ನು ಹಿಡಿದು ಟಿಎಂಸಿ ನಾಯಕರ ಬಳಿ ಮನವಿ ಮಾಡಿಕೊಂಡಿದ್ದರು.
ಕೆಲ ದಿನಗಳ ಹಿಂದೆ ಕೆಲವರು ಗ್ರಾಮದ ತುಂಬೆಲ್ಲಾ ಬಿಜೆಪಿ ಸೇರ್ಪಡೆ ನಮ್ಮ ತಪ್ಪು ಎಂದು ಮೈಕ್‍ನಲ್ಲಿ ಅನೌನ್ಸ್ ಮೆಂಟ್ ಮಾಡಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಇತ್ತ ಮುಕುಲ್ ರಾಯ್ ಅವರನ್ನು ಮತ್ತೆ ಟಿಎಂಸಿಗೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿಗೆ ಮಮತಾ ಬ್ಯಾನರ್ಜಿ ಟಕ್ಕರ್ ಕೊಟ್ಟಿದ್ದರು.