ನವದೆಹಲಿ : ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆ ಬಳಕೆ ಲಸಿಕಾ ಪಟ್ಟಿಯಲ್ಲಿ ಕೊವ್ಯಾಕ್ಸಿನ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಜೂನ್ 23ಕ್ಕೆ WHO ಗೆ ದಾಖಲೆಗಳನ್ನು ಸಲ್ಲಿಸಲು ಭಾರತ್ ಬಯೋಟೆಕ್ ಮುಂದಾಗಿದೆ.
ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಪಡೆದಿರುವ ಕೊವ್ಯಾಕ್ಸಿನ್‌ಗೆ ಜಾಗತಿಕ ಮನ್ನಣೆ ನೀಡುವ ದೃಷ್ಟಿಯಿಂದ WHO ತುರ್ತು ಬಳಕೆ ಪಟ್ಟಿಯಲ್ಲಿ ಸೇರುವುದು ಅನಿವಾರ್ಯವಾಗಿರುವ ಹಿನ್ನಲೆ ಭಾರತ್ ಬಯೋಟೆಕ್ ಹೆಚ್ಚುವರಿ ಅಧ್ಯಯನ ವರದಿಗಳನ್ನು WHO ಗೆ ಸಲ್ಲಿಸಲಿದೆ
ಭಾರತ್ ಬಯೋಟೆಕ್ ಸಲ್ಲಿಸಲಿರುವ ವರದಿಗಳನ್ನು ಆಧರಿಸಿ ತುರ್ತು ಬಳಕೆಗೆ ಅನುಮತಿ ನೀಡುವ ಬಗ್ಗೆ WHO ನಿರ್ಧಾರ ತೆಗೆದುಕೊಳ್ಳಲಿದ್ದು ಅನುಮತಿ WHOನಿಂದ ತುರ್ತು ಬಳಕೆ ಅನುಮತಿ ಸಿಕ್ಕಲ್ಲಿ ಕೊವ್ಯಾಕ್ಸಿನ್ ಲಸಿಕೆಗೆ ಜಾಗತಿಕ ಮನ್ನಣೆ ಸಿಗಲಿದೆ.

ಕೊವ್ಯಾಕ್ಸಿನ್ WHO ಮಾನ್ಯತೆ ಪಡೆಯದ ಹಿನ್ನಲೆ ಈ ವ್ಯಾಕ್ಸಿನ್ ಪಡೆದು ವಿದೇಶಗಳಿಗೆ ತೆರಳಲು ಸಾಧ್ಯವಿಲ್ಲ, ಈ ವ್ಯಾಕ್ಸಿನ್‌ಗೆ ಅಂತರಾಷ್ಟ್ರೀಯ ಮಟ್ಟದ ಮಾನ್ಯತೆ ಇಲ್ಲ ಎಂದು ಆರೋಪಿಸಲಾಗಿತ್ತು. ಈ ಆರೋಪಗಳ ಬೆನ್ನಲೆ WHO ನಿಂದ ಅಂತರಾಷ್ಟ್ರೀಯ ಮಾನ್ಯತೆ ಪಡೆಯಲು ಕೊವ್ಯಾಕ್ಸಿನ್ ಪ್ರಯತ್ನಪಡುತ್ತಿದೆ.