ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿದ್ದ 115 ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಆಗಸ್ಟ್ 12, 2020ರಂದು ಈ 115 ಜನರನ್ನು ಬಂಧಿಸಲಾತ್ತು.
ಪ್ರಕರಣದ ತನಿಖೆ ಪೂರ್ಣಗೊಳಿಸಲು ಎನ್‍ಐಎಗೆ 90 ದಿನ ಹೆಚ್ಚುವರಿ ಸಮಯ ನೀಡಿದ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಬಂಧಿತ ಮುಜಾಮಿಲ್ ಸೇರಿದಂತೆ 115 ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಶ್ವಜಿತ್ ಶೆಟ್ಟಿ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾ ಡಿ ಆದೇಶ ನೀಡಿದೆ.

ನ್ಯಾಯಾಲಯ ಹೇಳಿದ್ದೇನು?: ತನಿಖಾ ಅವಧಿಯ ವಿಸ್ತರಣೆ ಕೋರಿ ಅರ್ಜಿ ಸಲ್ಲಿಸಿದ ಮಾಹಿತಿಯನ್ನು ಆರೋಪಿಗಳ ಗಮನಕ್ಕೆ ತರಬೇಕು. ಆದ್ರೆ ಇಲ್ಲಿ ಆರೋಪಿಗಳಿಗೆ ಯಾವುದೇ ಮಾಹಿತಿಯನ್ನ ನೀಡಲಾಗಿಲ್ಲ. ತನಿಖಾ ಅವಧಿ ವಿಸ್ತರಿಸಿ ನ್ಯಾಯಾಲಯ ಹೊರಡಿಸಿರುವ ಆದೇಶ ಕಾನೂನು ಬಾಹಿರ. ಹಾಗಾಗಿ ಅರ್ಜಿದಾರರು ಜಾಮೀನು ಪಡೆಯಲು ಅರ್ಹರು.
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿಯ ಫೇಸ್‍ಬುಕ್ ಪೋಸ್ಟ್ ನಿಂದಾಗಿ ಗಲಾಟೆ ನಡೆದಿತ್ತು. ಉದ್ರಿಕ್ತರು ಶಾಸಕರ ಮನೆ, ಪೊಲೀಸ್ ಠಾಣೆಗೂ ಬೆಂಕಿ ಹಾಕಿದ್ದರು. ಅಲ್ಲದೇ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳನ್ನ ಸಹ ಜಖಂ ಮಾಡಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 115 ಆರೋಪಿಗಳನ್ನು ಬಂಧಿಸಲಾಗಿತ್ತು. ಬಂಧಿಸಿದಿ 90 ದಿನಗಳೊಗೆ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಬೇಕು. ಈ ಅವಧಿ ನವೆಂಬರ್ 9, 2020ಕ್ಕೆ ಅಂತ್ಯವಾದ ಹಿನ್ನೆಲೆ ತನಿಖಾ ಅವಧಿಯನ್ನ 90 ದಿನಗಳ ಕಾಲ ವಿಸ್ತರಿಸಲಾಗಿತ್ತು.