ನವದೆಹಲಿ : ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಆಂಟಿ-ಕೋವಿಡ್ ಡ್ರಗ್ 2-ಡಿಜಿ ರೂಪಾಂತರಿ ವೈರಸ್ ವಿರುದ್ಧವೂ ಪರಿಣಾಮಕಾರಿಯಾಗಿದೆ ಎಂದು ಹೊಸ ಅಧ್ಯಯನ ವರದಿ ಹೇಳಿದೆ.
ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ವೈರಸ್ ಹತ್ತಕ್ಕೂ ಹೆಚ್ಚು ಬಗೆಯಲ್ಲಿ ರೂಪಾಂತರಿಗೊಂಡಿರುವ ಹಿನ್ನಲೆ ಡ್ರಗ್ 2-ಡಿಜಿ ಪರಿಣಾಮಕಾರಿತ್ವದ ಬಗ್ಗೆ ಹೊಸ ಅಧ್ಯಯನ ನಡೆಸಲಾಗಿತ್ತು.
ಅಧ್ಯಯನದಲ್ಲಿ ಡ್ರಗ್ 2-ಡಿಜಿ ಎಲ್ಲಾ ಮಾದರಿ ಕೊರೊಮಾ ರೂಪಾಂತರಿ ವೈರಸ್ ವಿರುದ್ಧ ಹೋರಾಡಬಲ್ಲದು, ಕೊರೊನಾ ಸೋಂಕು ಹರಡುವುದನ್ನು ತಡೆಯಬಲ್ಲದು ಮತ್ತು ಜೀವ ಕೋಶಗಳಲ್ಲಿ ಸೋಂಕು ಹೆಚ್ಚು ವ್ಯಾಪಿಸದಂತೆ ನಿಯಂತ್ರಿಸಬಲ್ಲದು ಎಂದು ಹೊಸ ಪ್ರಾಥಮಿಕ ಅಧ್ಯಯನ ವರದಿಯಲ್ಲಿ ತಿಳಿಸಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಡಾ. ರೆಡ್ಡಿ ಅವರ ಪ್ರಯೋಗಾಲಯಗಳು ಜಂಟಿಯಾಗಿ ಈ ಔಷಧಿಯನ್ನು ಅಭಿವೃದ್ಧಿಪಡಿಸಿವೆ.