ಬೆಂಗಳೂರು: ಕೊರೊನಾ ಬಳಿಕ ಬಹುತೇಕರಲ್ಲಿ ಹಲ್ಲುಗಳಿಗೆ ಸಂಬಂಧಿಸಿದಂತೆ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ನಿರ್ಲಕ್ಷ್ಯಿಸಿದ್ರೆ ಅದು ನಿಮ್ಮನ್ನು ಅಪಾಯಕ್ಕೆ ತಂದೊಡ್ಡುವ ಸಾಧ್ಯತೆಗಳಿವೆ. ಹಾಗಾಗಿ ನಿಮ್ಮ ನಿರ್ಲಕ್ಷ್ಯ ಜೀವಕ್ಕೆ ಅಪಾಯಕ್ಕೆ ತರುವ ಸಾಧ್ಯತೆಗಳಿವೆ,
ದಂತವೈದ್ಯ ಡಾ.ಡಿ.ರಾಜನ್ ಪ್ರಕಾರ, ಕೋವಿಡ್ ನಂತರ ಬಹುತೇಕರಲ್ಲಿ ಹಲ್ಲು ಮತ್ತು ಒಸಡುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಸಾಮಾನ್ಯವಾಗಿ ಸಣ್ಣ ಸಮಸ್ಯೆಗಳಿಂದ ಜನರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ನಿರ್ಲಕ್ಷ್ಯ ಮುಂದೆ ಬ್ಲ್ಯಾಕ್ ಫಂಗಸ್ ಬದಲಾಗುವ ಸಾಧ್ಯತೆಗಳೇ ಹೆಚ್ಚು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಸೋಂಕು ತಗುಲಿದಾಗ ಮಲಗುವ ಮುನ್ನ ಪ್ರತಿದಿನ ಹಲ್ಲುಜ್ಜಬೇಕು. ಪೊವಿಡೊನ್-ಐಯೊಡಿನ್ ಮೌಥ್ ವಾಶ್ ನಿಂದ ದಿನಕ್ಕೆ ಮೂರು ಬಾರಿ ಬಾಯಿ ಸ್ವಚ್ಛಗೊಳಿಸಬೇಕು. ಕೋವಿಡ್ ನಿಂದ ಗುಣಮುಖರಾದ ಬಳಿಕವೂ ಒಂದು ತಿಂಗಳಕ್ಕೂ ಅಧಿಕ ಕಾಲ ಈ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಡಾ.ರಾಜನ್ ಸಲಹೆ ನೀಡಿದ್ದಾರೆ.