ನವದೆಹಲಿ: ಭಾರತದಲ್ಲಿ ಟ್ವಿಟ್ಟರ್ ಗಿದ್ದ ಕಾನೂನು ಸುರಕ್ಷಾ ಕವಚ ಕೊನೆಯಾಗಿದ್ದು, ಘಾಜಿಯಾಬಾದ್ ವೀಡಿಯೋ ಸಂಬಂಧ ಟ್ವಟ್ಟರ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಸರ್ಕಾರ ಫೆಬ್ರವರಿ 25ರಂದು ಹೊಸ ಕಾನೂನು ನಿಯಮಗಳನ್ನು ಜಾರಿಗೆ ತಂದಿತ್ತು. ಆದ್ರೆ ಈ ನಿಯಮಗಳನ್ನ ಪಾಲಿಸದ್ದಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಎಫ್‍ಐಆರ್ ಅಥವಾ ನೋಟಿಸ್ ನೀಡಿರುವ ಕುರಿತು ಕೇಂದ್ರದಿಂದ ಅಧಿಕೃತ ಹೇಳಿಕೆ ಹೊರಬಂದಿಲ್ಲ. ರಾಷ್ಟ್ರೀಯ ಮಾಧ್ಯಮಗಳ ಈ ಕುರಿತು ವರದಿ ಬಿತ್ತರಿಸಿವೆ.
ಏನಿದು ಹೊಸ ನಿಯಮ?:
ಹೊಸ ನಿಯಮಗಳ ಪ್ರಕಾರ ಭಾರತದ ಕಾನೂನಿಗೆ ಟ್ವಿಟ್ಟರ್ ಒಳಪಡುತ್ತದೆ. ಟ್ವಟ್ಟರ್ ಅಥವಾ ಇತರೆ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಕಟವಾಗಿ ಪ್ರಚೋಧನಕಾರಿ, ಸಮಾಜದ ಸ್ವಾಸ್ಥ್ಯ ಕದಡುವ ಸಂದೇಶಗಳಿಗೆ ಆ ವೇದಿಕೆಯೇ ಜವಾಬ್ದಾರಿ. ಐಟಿ ಆ್ಯಕ್ಟ್ 79 ಪ್ರಕಾರ ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರಂಗಳಿಗೆ ಲೀಗಲ್ ಪ್ರೊಟೆಕ್ಷನ್ ಸಿಗುತ್ತೆ. ಈ ಪ್ಲಾಟ್‍ಫಾರಂ ಕಾನೂನು ಬಾಹಿರ ವೀಡಿಯೋ ಅಥವಾ ಸಂದೇಶ ಪ್ರಕಟವಾದ್ರೆ ಅದಕ್ಕೆ ಕಂಪನಿ ಹೊಣೆಗಾರ ಆಗಲ್ಲ. ಆದ್ರೆ ಈ ಕಾನೂನು ಸದ್ಯ ಬದಲಾಗಿದ್ದು, ಇಂತಹ ಕಂಟೆಂಟ್ ಬಂದ್ರೆ ಆ ವೇದಿಕೆಯನ್ನ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಸದ್ಯ ಟ್ವಿಟ್ಟರ್ ವಿರುದ್ಧ ಆಕ್ಷೇಪಾರ್ಹ ಕಂಟೆಂಟ್ ಪ್ರಸಾರ ಮಾಡಿದ ಆರೋಪ ಕೇಳಿ ಬಂದಿದೆ.

ಮೂವರು ಅಧಿಕಾರಿಗಳ ನೇಮಕ:
ಕೇಂದ್ರ ಸರ್ಕಾರ ಫೆಬ್ರವರಿ 25ರಂದು ಐಟಿ ಆ್ಯಕ್ಟ್ ನಿಯಮಗಳನ್ನ ಘೋಷಿಸಿ ಎಲ್ಲ ಸೋಶಿಯಲ್ ಮೀಡಿಯಾ ವೇದಿಕೆಗಳಿಗೆ ಇವುಗಳನ್ನು ಪಾಲಿಸುವಂತೆ ಸೂಚನೆ ನೀಡಿತ್ತು. ಇದಕ್ಕಾಗಿ ಎಲ್ಲರಿಗೂ ಮೂರು ತಿಂಗಳ ಕಾಲಾವಕಾಶ ಸಹ ನೀಡಲಾಗಿತ್ತು. ಈ ನಿಯಮಗಳ ಪ್ರಕಾರ, ಭಾರತದ ಓರ್ವ ನೋಡಲ್ ಅಧಿಕಾರಿ, ದೂರು ಸ್ವೀಕರಿಸುವ ಅಧಿಕಾರಿ ಮತ್ತು ಕಾನೂನು ಪಾಲನೆ ಅಧಿಕಾರಿಯನ್ನು ನೇಮಿಸಬೇಕು. ನಿಯಮಗಳ ಪ್ರಕಾರ ಅಧಿಕಾರಿ ಭಾರತೀಯ ಮತ್ತು ಕಂಪನಿಯ ಉದ್ಯೋಗಿಯೇ ಆಗಿರಬೇಕು ಅಂತ ಹೇಳಲಾಗಿತ್ತು. ಆದ್ರೆ ಟ್ವಿಟ್ಟರ್ ಇದುವರೆಗೂ ಈ ನಿಯಮಗಳನ್ನು ಅನ್ವಯಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ.
ಟ್ವಟ್ಟರ್ ಗೆ ನೋಟಿಸ್:
ಈ ಸಂಬಂಧ ಸರ್ಕಾರ ಟ್ವಟ್ಟರ್ ಗೆ ಸಮಯ ಸಹ ನೀಡಿತ್ತು. ಜೂನ್ 5ರಂದು ಟ್ವಟ್ಟರ್ ಗೆ ನೋಟಿಸ್ ನೀಡಲಾಗಿತ್ತು. ಈ ನೋಟಿಸ್ ಗೆ ಪ್ರತಿಕ್ರಿಯೆ ನೀಡಿದ್ದ ಟ್ವಿಟ್ಟರ್, ನೋಡಲಲ್ ಮತ್ತು ದೂರು ಸ್ವೀಕರಿಸುವ ಅಧಿಕಾರಿ ರೂಪದಲ್ಲಿ ಒಬ್ಬರನ್ನ ನೇಮಿಸಲಾಗಿದೆ ಎಂಬುದರ ಕುರಿತು ಮಾಹಿತಿ ನೀಡಿತ್ತು. ಆದ್ರೆ ನೇಮಕಗೊಂಡ ಅಧಿಕಾರಿ ಟ್ವಿಟ್ಟರ್ ಕಂಪನಿಯ ಉದ್ಯೋಗಿ ಅಲ್ಲ ಎಂದು ಹೇಳಲಾಗ್ತಿದೆ.

ವರದಿಗಳ ಪ್ರಕಾರ, ಟ್ವಿಟ್ಟರ್ ಭಾರತದಲ್ಲಿ ಮುಖ್ಯ ಅನುಪಾಲನ ಅಧಿಕಾರಿ ರೂಪದಲ್ಲಿ ನೇಮಿಸಿದ್ದು, ನೇಮಕಗೊಂಡ ಅಧಿಕಾರಿ ಹೆಸರನ್ನ ಸರ್ಕಾರವೇ ಘೋಷಣೆ ಮಾಡಲಿದೆ. ಸದ್ಯ ಟ್ವಿಟ್ಟರ್ ನಲ್ಲಿ ಪ್ರಕಟವಾಗುವ ಆಕ್ಷೇಪಾರ್ಹ ಕಂಟೆಂಟ್ ಗಳಿಗೆ ಅದೇ ಹೊಣೆ ಆಗೋದು ಮಾತ್ರ ಖಚಿತ.
ಮೊದಲ ಎಫ್‍ಐಆರ್: ಗಾಜಿಯಾಬಾದ್ ಓರ್ವ ವೃದ್ಧನ ವೀಡಿಯೋ ವೈರಲ್ ಆಗಿದೆ. ಇದರಲ್ಲಿ ಕೆಲವಬರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಕೋಮು ಸ್ಪರ್ಶ ನೀಡಲಾಗಿದೆ ಎಂಬ ಆರೋಪದಡಿ ಟ್ವಿಟ್ಟರ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.