- 107.50 ರೂ.ಗೆ ತಲುಪಿದ ಬೆಲೆ
ನವದೆಹಲಿ: ಕಳೆದ 42 ದಿನಗಳಲ್ಲಿ ತೈಲ ಬೆಲೆ 24 ಬಾರಿ ಏರಿಕೆಯಾಗಿದ್ದು, ಏಳು ರಾಜ್ಯಗಳಲ್ಲಿ ಶತಕ ದಾಖಲಿಸಿದೆ. ಒಂಬತ್ತು ರಾಜ್ಯಗಳಲ್ಲಿ ನೂರರ ಗಡಿ ದಾಟಿ ಪೆಟ್ರೋಲ್ ಬೆಲೆ ಮುನ್ನುಗ್ಗುತ್ತಿದೆ.
ದೇಶದ 148 ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದೆ. ರಾಜಸ್ಥಾನ, ಮಧ್ಯ ಪ್ರದೇಶ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಸೇರಿದಂತೆ 9 ರಾಜ್ಯಗಳಲ್ಲಿ ಅತಿ ಹೆಚ್ಚು ದರ ದಾಖಲಾಗುತ್ತಿದೆ. ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 107.53 ರೂ. ಏರಿಕೆಯಾಗಿ ದಾಖಲೆ ಬರೆದಿದೆ.