ಬೆಂಗಳೂರು : ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕನ್ನಡದ ಪ್ರಥಮ ನಟ ಸಂಚಾರಿ ವಿಜಯ್ ಇನ್ನಿಲ್ಲ, ಇಂದು ಬೆಳಗ್ಗೆ 3:30 ರ ವೇಳೆಗೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಶುಕ್ರವಾರ ಜೆ.ಪಿ ನಗರದ 7 ಹಂತದಲ್ಲಿ ಸಂಚಾರಿ ವಿಜಯ್ ಬೈಕ್ ಅಪಘಾತಕ್ಕೀಡಾಗಿತ್ತು, ಅಪಘಾತದಲ್ಲಿ ಸಂಚಾರಿ ವಿಜಯ್ ಮೆದುಳಿಗೆ ತೀವ್ರ ಹಾನಿಯಾಗಿ ಮೆದಳು ತನ್ನ ಕಾರ್ಯ ನಿಲ್ಲಿಸಿತ್ತು.

ಅವರು ಬದುಕಿಬಾರನ್ನು ಖಾತ್ರಿಪಡಿಸಿಕೊಂಡ ಕುಟುಂಬ ನಿನ್ನೆ ವಿಜಯ್ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು. ಅಂತಯೇ ನಿನ್ನೆ ರಾತ್ರಿ ಕಣ್ಣು, ಕಿಡ್ನಿ, ಲಿವರ್ ಸೇರಿದಂತೆ ಹಲವುಗಳನ್ನು ದಾನ ಮಾಡಲಾಗಿದೆ. ಅಂಗಾಂಗ ದಾನದ ಬಳಿಕ ಇಂದು ಬೆಳಗ್ಗೆ ಸಂಚಾರಿ ವಿಜಯ್ ಸಾವನ್ನು ವೈದ್ಯರು ಧೃಡಿಕರಿಸಿದ್ದಾರೆ.
ಚಂದನವನದಲ್ಲಿ ಸಂಚಾರಿ ವಿಜಯ್ ಮೃದು ಮನಸ್ಸಿನ ಕಲಾವಿದ ಎಂದು ಖ್ಯಾತರು. ರಂಗಭೂಮಿಯಿಂದ ಬಂದು ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದರು, ಬಡತನ, ಅವಮಾನ ಎಲ್ಲವೂ ಸಹಿತ ಹಂತ ಹಂತವಾಗಿ ಮೇಲೆ ಬಂದಿದ್ದ ಪ್ರತಿಭಾನ್ವಿತ ನಟರಾಗಿದ್ದರು.

ಜುಲೈ 18, 1983 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಪಂಚೇನಹಳ್ಳಿಯಲ್ಲಿ ಜನನವಾಗಿದ್ದ ಸಂಚಾರಿ ವಿಜಯ್ ಪೂರ್ಣ ಹೆಸರು ವಿಜಯ್ ಕುಮಾರ್ ಬಸವರಾಜಯ್ಯ, ತಂದೆ ಬಸವರಾಜಯ್ಯ ತಾಯಿ ಗೌರಮ್ಮ, ಚಿಕ್ಕ ವಯಸ್ಸಿನಲ್ಲಿ ಪೊಷಕರನ್ನು ಕಳೆದುಕೊಂಡಿದ್ದರು.
ಪೊಷಕರ ನಿಧನದ ಬಳಿಕ ಅಣ್ಣನ ವಿಧ್ಯಭ್ಯಾಸಕ್ಕೆ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಕ್ಲೀನರ್ ಕೆಲಸಕ್ಕೆ ಸೇರಿದ್ದರು, ಅಣ್ಣನ ಪಿಯುಸಿ ಬಳಿಕ ವಿಜಯ್ ಓದು ಆರಂಭಿಸಿ ಇಂಜಿನಿಯ ಪದವಿ ಪಡೆದಿದ್ದರು. ಚಿಕ್ಕಂದಿನಿಂದಲೇ ರಂಗಭೂಮಿ ಆಸಕ್ತಿ ಇದ್ದ ಹಿನ್ನಲೆ ಕಾಲೇಜು ದಿನಗಳಲ್ಲಿ ರಂಗಭೂಮಿ ಜೊತೆಗೆ ತೊಡಗಿಸಿಕೊಂಡರು. ಹಲವು ನಾಟಕ ಕಂಪನಿಗಳ ಬಳಿಕ ಸಂಚಾರಿ ಥಿಯೇಟರ್ ಸೇರಿಕೊಂಡರು.

ವಿಜಯ್ ಅವರು 2011 ರ ಕನ್ನಡ ಚಿತ್ರ ರಂಗಪ್ಪ ಹೊಗ್ಬಿಟ್ನಾ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು, ರಾಮ ರಾಮ ರಘು ರಾಮ ಚಿತ್ರದಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದರು, ದಾಸವಾಳ ಚಿತ್ರದಲ್ಲಿನ ಅಭಿನಯಕ್ಕೆ ಮಾನ್ಯತೆ ಪಡೆಯುವ ಮೊದಲು ಅವರು ಒಗ್ಗರನೆ (2014) ಮತ್ತು ಪ್ರಮುಖ ನಟನಾಗಿ ಹರಿವು (2014) ನಲ್ಲಿ ನಟಿಸಿದರು

ಬಳಿಕ ನಾನು ಅವನಲ್ಲ ಅವಳು ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದರು, ಇದಕ್ಕೆ 2016ರಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡರು, ಕನ್ನಡ ಚಿತ್ರರಂಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲಿಗ ಎಂದು ಖ್ಯಾತರಾದರು. ಈವರೆಗೂ ಕಲಾತ್ಮಕ ಚಿತ್ರಗಳು ಸೇರಿ ಒಟ್ಟು 22 ಸಿನಿಮಾಗಳಲ್ಲಿ ವಿಜಯ್ ಅಭಿನಯಿಸಿದ್ದಾರೆ

ಕೊರೊನಾ ಸಂಕಷ್ಟ ಕಾಲದಲ್ಲಿ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸೇರಿ ಅಗತ್ಯ ಸಹಾಯ ಮಾಡುವ ಕಾರ್ಯದಲ್ಲಿ ಸಂಚಾರಿ ವಿಜಯ್ ತೊಗಡಿದ್ದರು. ಎರಡನೇ ಅಲೆಯಲ್ಲಿ ಸಾಕಷ್ಟು ಜನರಿಗೆ ನೆರವಾಗುವ ಪ್ರಯತ್ನವನ್ನು ಮಾಡಿದ್ದಾರೆ. ಫುಡ್ ಕಿಟ್ ಹಂಚಲು ತೆರಳುತ್ತಿದ್ದಾಗ ಈ ರಸ್ತೆ ಅಪಘಾತ ನಡೆದಿದೆ ಎಂದು ಹೇಳಲಾಗಿದೆ.

