ನವದೆಹಲಿ : ಕೊರೊನಾ ಸೋಂಕು ವೈರಸ್ ಹರಡುವಿಕೆ ಭೀತಿ ಹಿನ್ನಲೆಯಲ್ಲಿ ಈ ಬಾರಿ ಸೀಮಿತವಾಗಿ ಹಜ್ ಯಾತ್ರೆ ನಡೆಸಲು ಸೌದಿ ಅರೇಬಿಯಾ ಸರ್ಕಾರ ನಿರ್ಧರಿಸಿದ್ದು, ಹಜ್ ಯಾತ್ರೆಯಲ್ಲಿ ಭಾಗಿಯಾಗಲು ತನ್ನ ದೇಶದ ಪ್ರಜೆಗಳಿಗೆ ಮಾತ್ರ ಅವಕಾಶ ನೀಡಿದೆ.

ಹೊರ ದೇಶಗಳ ಯಾತ್ರಾರ್ಥಿಗಳಿಗೆ ಹಜ್ ಯಾತ್ರೆಗೆ ಅವಕಾಶ ನೀಡಿದ ಹಿನ್ನಲೆ ಭಾರತದಿಂದ ಹಜ್ ಯಾತ್ರೆಗೆ ತೆರಳಲು ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ಹಜ್ ಸಮಿತಿ ಅಧಿಕೃತ ಮಾಹಿತಿ ನೀಡಿದ್ದು, 2021ರ ಹಜ್ ಯಾತ್ರೆಗೆ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ರದ್ದು ಮಾಡಿರುವುದಾಗಿ ತಿಳಿಸಿದೆ.

ಸರ್ಕಾರದ ಈ ನಿರ್ಧಾರದಿಂದಾಗಿ ಈ ವರ್ಷ ಹಜ್ ಯಾತ್ರೆಗಾಗಿ ಭಾರತದಿಂದ ಯಾರು ತೆರಳಲು ಸಾಧ್ಯವಿಲ್ಲ. ಕೊರೊನಾ ಸೋಂಕಿನ ಕಾರಣದಿಂದ 2020 ರ ಹಜ್ ಯಾತ್ರೆಯನ್ನು ಸಂಪೂರ್ಣ ರದ್ದು ಮಾಡಲಾಗಿತ್ತು.