ಲಕ್ನೋ: ರಾಮ ಭಕ್ತರಿಗೆ ರಾಮ ದ್ರೋಹಿಗಳಿಂದ ಉಪದೇಶ ಬೇಡ. ತನಿಖೆ ಮಾಡಿಸುತ್ತೇವೆ ಎಂದು ಉತ್ತರ ಪ್ರದೇಶ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ.
ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ ಎಂದು ಆಪ್ ಮುಖಂಡ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಟ್ರಸ್ಟ್ ತಳ್ಳಿ ಹಾಕಿದೆ. ಈಗ ಟ್ರಸ್ಟ್ ಸದಸ್ಯರ ನಡುವೆ ಭಿನ್ನಮತ ಉಂಟಾಗಿದೆ ಎನ್ನಲಾಗಿದೆ. ರಾಮ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ಮಹಂತ್ ಗೋಪಾಲ್‍ದಾಸ್ ಅನಾರೋಗ್ಯದ ಕಾರಣ ಕಮಲನಯನ್ ದಾಸ್ ಅವರನ್ನ ತಮ್ಮ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಮಲನಯನ್, ಟ್ರಸ್ಟ್ ಸದಸ್ಯರನ್ನೇ ಪ್ರಶ್ನೆ ಮಾಡಿದ್ದಾರೆ.

ಇನ್ನೂ ಈ ಕುರಿತು ಟ್ವೀಟ್ ಮಾಡಿರುವ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ, ಆರೋಪ ಮಾಡಿದವರನ್ನು ರಾಮ ದ್ರೋಹಿಗಳೆಂದು ಕರೆದಿದ್ದಾರೆ. ರಾಮಲಲ್ಲಾನ ಭವ್ಯವಾದ ಮಂದಿರ ನಿರ್ಮಾಣ ಆಗುತ್ತಿರೋದು ರಾಮದ್ರೋಹಿಗಳಿಗೆ ನೋಡಲು ಆಗುತ್ತಿಲ್ಲ. ರಾಮ ಭಕ್ತರಿಗೆ ರಾಮದ್ರೋಹಿಗಳ ಉಪದೇಶ ಬೇಕಿಲ ಎಂದು ಹೇಳಿದ್ದಾರೆ.
ಏನದು ಆರೋಪ?:
ಇಬ್ಬರು ರಿಯಲ್ ಎಸ್ಟೇಟ್ ಉದ್ಯಮಿಗಳು ಓರ್ವನಿಂದ 2 ಕೋಟಿ ರೂ. ನೀಡಿ ಆಸ್ತಿಯನ್ನು ಖರೀದಿಸುತ್ತಾರೆ. ಇದೇ ಆಸ್ತಿಯನ್ನು ಕೆಲವೇ ನಿಮಿಷಗಳಲ್ಲಿ ಉದ್ಯಮಿಗಳಿಂದ ದೇವಸ್ಥಾನದ ಟ್ರಸ್ಟ್ 18.5 ಕೋಟಿ ನೀಡಿ ಖರೀದಿಸಿದೆ ಎಂಬುವುದು ವಿಪಕ್ಷಗಳ ಆರೋಪ. ಎರಡೇ ನಿಮಿಷದಲ್ಲಿ ಆ ಆಸ್ತಿಯ ಬೆಲೆ ಏರಿಕೆಯಾಗಿದ್ದು ಹೇಗೆ ಎಂದು ಪ್ರಶ್ನೆ ಮಾಡಿವೆ. ಈ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಗಹಿಸಿವೆ.

ದೇಶದ ಜನತೆಗೆ ಅವಮಾನ: ದೇಶದ ಜನರು ತಮ್ಮ ಉಳಿತಾಯದ ಹಣವನ್ನು ರಾಮ ಮಂದಿರ ನಿರ್ಮಾಣಕ್ಕಾಗಿ ನೀಡಿದ್ದಾರೆ. ರಾಮ ಮಂದಿರ ಟ್ರಸ್ಟ್ ಖರೀದಿಸಿರುವ ಆಸ್ತಿಯ ಮೌಲ್ಯ ಕೆಲವೇ ಕ್ಷಣಗಳಲ್ಲಿ 16.5 ಕೋಟಿ ಏರಿಕೆಯಾಗಿದ್ದು ಹೇಗೆ? ಉಳಿತಾಯ ಹಣ ದಾನ ಪಡೆದ ಟ್ರಸ್ಟ್ ದೇಶದ 120 ಕೋಟಿ ಜನರನ್ನು ಅವಮಾನಿಸಿದ ಎಂದು ಸಮಾಜವಾದಿ ಪಕ್ಷದ ಮುಖಂಡ, ಮಾಜಿ ಸಚಿವ ಪವನ್ ಪಾಂಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.