ಬೆಂಗಳೂರು: ನಟ ಚೇತನ್ ಅವರೇ ನಿಮ್ಮ ಮನಸ್ಸನ್ನು ಪರಿಶುದ್ಧಗೊಳಿಸಬೇಕಿದೆ ಎಂದು ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡುವ ಮೂಲಕ ಚಾಟಿ ಬೀಸಿದ್ದಾರೆ.
ಆಗಿದ್ದೇನು?
ನಟ ಚೇತನ್ ಬರೆದ ಲೇಖನಕ್ಕೆ ಪತ್ರಕರ್ತ ಸುದೀಪ್ತೋ ಮೊಂಡಲ್ ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ್ದರು. ದಕ್ಷಿಣ ಭಾರತ ಅತೀ ಕೆಟ್ಟ ಚಲನಚಿತ್ರೋದ್ಯಮದಲ್ಲಿ ಅಂತಿಮವಾಗಿ ಭರವಸೆಯ ಕಿರಣ ಮೂಡಿದ್ದು, ಕನ್ನಡ ಸಿನಿಮಾದ ಒಣ ಭೂಮಿಯಲ್ಲಿ ಚೇತನ್ ಅಗತ್ಯವಿರುವ ಮಳೆಗಾಲ ಎಂದು ಚಂದನವನವನ್ನು ವ್ಯಂಗ್ಯ ಮಾಡಿದ್ದರು. ಇನ್ನು ಮೊಂಡಲ್ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಚೇತನ್, ನಿಮ್ಮ ಮೆಚ್ಚುಗೆಯ ಮಾತಿಗಳಿದೆ ಧನ್ಯವಾದ. ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಹಲವು ಅತ್ಯತ್ತುಮ ಚಲನಚಿತ್ರಗಳನ್ನು ಮಾಡಿದ್ದೇವೆ. ಇನ್ನುಳಿದ ಚಿತ್ರರಂಗಳಂತೆ ವಿಷಯ ಮತ್ತು ರಚನಾತ್ಮಕ ಸುಧಾರಣೆಗಳ ವಿಷಯದಲ್ಲಿ ವಿಕಸನಗೊಳ್ಳುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದರು.
Thank u for appreciative words about me. I respect ur pro-equality journalism
— Chetan Kumar / ಚೇತನ್ (@ChetanAhimsa) June 13, 2021
As for KFI we have made many great film in the past & are presently evolving in terms of content/structural reforms just like other industries
We take ur words— though harsh— as constructive feedback https://t.co/awpKOhZP7T
ಕನ್ನಡ ಚಿತ್ರರಂಗವನ್ನ ಅವಮಾನಿಸಿದ್ದಕ್ಕೆ ರಕ್ಷಿತ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಕನ್ನಡ ಚಿತ್ರರಂಗ ಅನೇಕ ಪ್ರತಿಭಾವಂತರಿಗೆ ಅತ್ತುತ್ತಮ ವೇದಿಕೆಯಾಗಿದೆ. ಇಂದಿಗೂ ವೇದಿಕೆ ಮುಕ್ತವಾಗಿದೆ. ನನಗಿಂತ ಮೊದಲು ಅನೇಕ ದಂತಕಥೆಗಳನ್ನು ಈ ಚಿತ್ರರಂಗ ನಿರ್ಮಿಸಿದೆ. ಏನೂ ಅಲ್ಲದ ನಾನು ಇಲ್ಲಿಯವರೆಗೆ ಬರಲು ಕಾರಣ ಕನ್ನಡ ಚಿತ್ರರಂಗ. ಸಾವಿರಾರರು ಜನರ ಬದುಕು ಈ ಚಿತ್ರರಂಗ ಎಂದು ವಾಗ್ದಾಳಿ ನಡೆಸಿದ್ದರು.
With all due respect to @ChetanAhimsa whom we admire for the work he does… but you sir, you have to clean up your mental space… for the ‘worst’ lies where worse is sowed… all the best with that 🤗
— Rakshit Shetty (@rakshitshetty) June 13, 2021
ಇನ್ನೂ ನಟ ಚೇತನ್ ವಿರುದ್ಧವೂ ಹರಿಹಾಯ್ದಿರುವ ರಕ್ಷಿತ್ ಶೆಟ್ಟಿ, ನಿಮ್ಮ ಸಾಮಾಜಿಕ ಕಾರ್ಯಗಳಿಗೆ ಮೆಚ್ಚುಗೆ ಇದೆ. ಕೆಟ್ಟ ಸುಳ್ಳುಗಳಿಂದ ಕೆಡಕು ಬಿತ್ತುತ್ತಿರುವ ನಿಮ್ಮ ಮನಸ್ಸು ಪರಿಶುದ್ಧಗೊಳಿಸಬೇಕಿದೆ ಎಂದು ಬರೆದು ಕಿಡಿಕಾರಿದ್ದಾರೆ.