ಬೆಂಗಳೂರು : ಹಿರಿಯ ಪತ್ರಕರ್ತ ಮತ್ತು ನಟ ಸುರೇಶ್ ಚಂದ್ರ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ ಐದಿನೈದು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು, ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ನಿಧನರಾಗಿದ್ದಾರೆ.
80 ದಶಕದಲ್ಲಿ ಪತ್ರಕರ್ತರಾಗಿದ್ದ ಸುರೇಶ್ ಚಂದ್ರ ಬಳಿಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ವಿಷ್ಣುವರ್ಧನ್, ಶಂಕರನಾಗ್, ದೇವರಾಜ್ ಸೇರಿ ಅನೇಕ ಹಿರಿಯ ನಟರೊಂದಿಗೆ ಅಭಿನಯಿಸಿದ್ದಾರೆ.
ಎಸ್ ನಾರಾಯಣ ನಿರ್ದೇಶನ ಚೆಲುವಿನ ಚಿತ್ತಾರ ಚಿತ್ರದಲ್ಲಿ ಪೊಷಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು ಸುಮಾರು 50 ಚಿತ್ರಗಳಿಗೆ ಬಣ್ಣ ಹೆಚ್ಚಿದ್ದಾರೆ. ಮಧುಗಿರಿ ಲಿಂಗೇನಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.