ಮುಂಬೈ : ದೇಶದ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಶತಕದ ಗಡಿ ದಾಟಿದ ಬಳಿಕವೂ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಸರ್ಕಸ್ ಅಂತ್ಯವಾಗಿಲ್ಲ. ಇಂದೂ ಪೆಟ್ರೋಲ್ – ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರ ಏರಿಸಿದೆ.
ಕೊರೋನಾ ಕಷ್ಟಕಾಲದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮೂಲಕ ಸರ್ಕಾರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಇಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 29 ಪೈಸೆ, ಡೀಸೆಲ್‌ಗೆ 28 ಪೈಸೆ ಏರಿಕೆ ಮಾಡಿದೆ.
ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ
• ಬೆಂಗಳೂರಿನಲ್ಲಿ ಪೆಟ್ರೋಲ್ 99.05 ರೂ., ಡೀಸೆಲ್ 91.97 ರೂ.
• ಭೂಪಾಲ್‌ನಲ್ಲಿ ಪೆಟ್ರೋಲ್ 104.01 ರೂ., ಡೀಸೆಲ್ 95.35 ರೂ.
• ಜೈಪುರನಲ್ಲಿ ಪೆಟ್ರೋಲ್ 102.44 ರೂ., ಡೀಸೆಲ್ 95.67 ರೂ.
• ಮುಂಬೈನಲ್ಲಿ ಪೆಟ್ರೋಲ್ 102.04 ರೂ., ಡೀಸೆಲ್ 94.15 ರೂ.
• ಪಾಟ್ನಾದಲ್ಲಿ ಪೆಟ್ರೋಲ್ 97.95 ರೂ., ಡೀಸೆಲ್ 92.05 ರೂ.
• ಚೆನ್ನೈನಲ್ಲಿ ಪೆಟ್ರೋಲ್ 97.19 ರೂ., ಡೀಸೆಲ್ 91.42 ರೂ.
• ಕೋಲ್ಕತ್ತಾದಲ್ಲಿ ಪೆಟ್ರೋಲ್ 95.80 ರೂ., ಡೀಸೆಲ್ 89.60 ರೂ.
• ದೆಹಲಿಯಲ್ಲಿ ಪೆಟ್ರೋಲ್ 95.85 ರೂ., ಡೀಸೆಲ್ 86.75 ರೂ.
• ಲಕ್ನೋದಲ್ಲಿ ಪೆಟ್ರೋಲ್ 93.09 ರೂ., ಡೀಸೆಲ್ 87.15 ರೂ.
• ರಾಂಚಿಯಲ್ಲಿ ಪೆಟ್ರೋಲ್ 92.08 ರೂ., ಡೀಸೆಲ್ 91.58 ರೂ.