ಬೆಂಗಳೂರು : ಪೆಟ್ರೋಲ್, ಡಿಸೇಲ್ ನಿರಂತರ ಬೆಲೆ ಏರಿಕೆ ಖಂಡಿಸಿ ಇಂದಿನಿಂದ ದೇಶದ್ಯಾಂತ ಕಾಂಗ್ರೆಸ್ ಪಕ್ಷ ಉಗ್ರ ಪ್ರತಿಭಟನೆ ಆರಂಭಿಸಿದೆ. ಮುಂದಿನ ಐದು ದಿನಗಳ ಕಾಲ ‘100 ನಾಟೌಟ್’ ಹೆಸರಿನಲ್ಲಿ ಕಾಂಗ್ರೆಸ್ ದೇಶದ್ಯಾಂತ ಪ್ರತಿಭಟನೆ ನಡೆಸಲಿದೆ.
ಬೆಂಗಳೂರು ಸೇರಿ ಇಂದು ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವರಾದ ರಾಮಲಿಂಗ ರೆಡ್ಡಿ, ಈಶ್ವರ್ ಖಂಡ್ರೆ ಸೇರಿ ಹಲವು ನಾಯಕರು ಭಾಗಿಯಾಗಿದ್ದರು.

ಪ್ರತಿಭಟನೆಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಇದೊಂದು ಐತಿಹಾಸಿಕ ಬೆಲೆ ದುರಂತ ಎಂದು ಆಕ್ರೊಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ನೀತಿಯಿಂದ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಬೆಲೆ ಏರಿಕೆ ಮಾಡಿ ಜನರ ಪಾಕೇಟ್ ಅನ್ನು ಪಿಕ್ ಪಾಕೇಟ್ ಮಾಡುತ್ತಿದೆ, ಸರ್ಕಾರದ ದುರಾಡಳಿತ ತಿಳಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
The BJP raised petrol prices 48 times in 2021.
— DK Shivakumar (@DKShivakumar) June 11, 2021
How many salary hikes did the middle class get?
By how much was minimum wage raised?
By how much were MGNREGA wages increased?
How many times were farmers’ MSPs increased?
This is daylight robbery by BJP. #Petrol100NotOut pic.twitter.com/7ztRcdqnC5
ಅಚ್ಛೆ ದಿನ್ ಆಯೇಂಗೆ ಅಂತಾ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಆಡಳಿತದ ಅವಧಿಯಲ್ಲಿ ನರಕದ ದಿನಗಳು ಬಂದಿವೆ ಎಂದು ಮಾಜಿ ಸಿಎಂ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ತೈಲ, ಗ್ಯಾಸ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೆ ಕೊರೊನಾ ಸಂಕಷ್ಟದಲ್ಲಿ ಜನರು ಬದುಕುವುದೇಗೆ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಅಧ್ಯಕ್ಷರಾದ @DKShivakumar, ಕೆಪಿಸಿಸಿ ಮಾಜಿ ಅಧ್ಯಕ್ಷರಾದ @DKShivakumar, ಮಾಜಿ ಸಚಿವರಾದ @RV_Deshpande ಸೇರಿದಂತೆ ಹಲವು ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.#Petrol100NotOut pic.twitter.com/x2lMqRtV7X
— Siddaramaiah (@siddaramaiah) June 11, 2021
2014 ರಲ್ಲಿ ಇಂಧನಗಳ ಬೆಲೆ 30-40 ರೂ ಇಳಕೆ ಮಾಡುವ ಭರವಸೆ ನೀಡಿದ ಪ್ರಧಾನಿ ಮೋದಿ ಇಂದು ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದ್ದು ಸಾಲುದು ಅಂತಾ ವಿದ್ಯುತ್ ಬೆಲೆ ಏರಿಸಿ ಗಾಯದ ಮೇಲೆ ಬರೆ ಹಾಕಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದರು.
#Petrol100NotOut protest by @INCKarnataka against the anti people policy of the @narendramodi & @BSYBJP Govts at Nehru Circle in my constituency.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 11, 2021
Shri @siddaramaiah, @DKShivakumar @RV_Deshpande, @iamvrsudarshan, @GShekarINC and other leaders participated. pic.twitter.com/jjmgoSnh5r
ಬಳಿಕ ಮಾತನಾಡಿದ ಮಾಜಿ ಸಚಿವ ರಾಮಲಿಂಗ ರೆಡ್ಡಿ, ಹಿಂದೆ 2 ರೂಪಾಯಿ ಹೆಚ್ಚಾದ್ರೆ ಬಿಜೆಪಿ ಬೊಬ್ಬೆ ಹೊಡೆಯುತ್ತಿತ್ತು ಆದರೆ ಇಂದು ಅದೇ ಬಿಜೆಪಿ 20-30 ಟ್ಯಾಕ್ಸ್ ಇಂಧನದ ಮೇಲೆ ಹಾಕಿದೆ ಎಂದರು.
Delhi | Congress holds protest against fuel price hike.
— ANI (@ANI) June 11, 2021
"When UPA was in power, tax on petrol & diesel was Rs 9.20. Now it is Rs 32. We demand complete rollback of excise duty hike on petrol-diesel. Fuel should come under the purview of GST," says Congress leader KC Venugopal pic.twitter.com/LRCww1t1ON
Punjab: Congress workers hold protest in Amritsar as part of party's nationwide protest against surge in fuel prices. pic.twitter.com/UhQKtFLQKR
— ANI (@ANI) June 11, 2021
ಇನ್ನು ಪಂಜಾಬ್, ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ಜೋರಾಗಿದ್ದು ಪ್ರತಿ ರಾಜ್ಯದಲ್ಲಿ 5000 ಪೆಟ್ರೋಲ್ ಬಂಕ್ ಗಳ ಮುಂದೆ ಪ್ರತಿಭಟನೆ ನಡೆಸುವ ಸಂಕಲ್ಪ ಕಾಂಗ್ರೆಸ್ ಮಾಡಿದೆ.
Tamil Nadu Congress president KS Alagiri along with party workers hold protest in Kilpauk, Chennai against rising fuel prices.
— ANI (@ANI) June 11, 2021
Congress is staging nationwide demonstrations today in view of the rising prices of petrol and diesel. pic.twitter.com/wMC7JxpN0Z