ಮುಂಬೈ: ಮೂರು ಉಚಿತ ವಹಿವಾಟಿನ ಬಳಿಕ ವಿಧಿಸುವ ಸೇವಾಶುಲ್ಕವನ್ನ ಏರಿಕೆ ಮಾಡಲು ರಿಸರ್ವ್ ಬ್ಯಾಂಕ್ ಗ್ರೀನ್ ಸಿಗ್ನಲ್ ನೀಡಿದೆ. ಈ ನಿಯಮ 2022 ಜನವರಿ 1 ರಿಂದ ಅನ್ವಯವಾಗಲಿದೆ.

ಸದ್ಯ ಗ್ರಾಹಕರಿಗೆ ಮಾಸಿಕ ಮೀತಿ ಮೀರಿದ ವ್ಯವಹಾರಕ್ಕೆ 20 ರೂ. ಶುಲ್ಕ ವಿಧಿಸಲಾಗುತ್ತಿದೆ. ಜನವರಿ 1ರಿಂದ ಈ ಶುಲ್ಕ 21 ರೂ.ಗೆ ಏರಿಕೆಯಾಗಲಿದೆ. ಗ್ರಾಹಕರು ತಾವು ಖಾತೆ ಹೊಂದಿರುವ ಬ್ಯಾಂಕ್ ನಿಂದ ತಿಂಗಳಿಗೆ ಐದು ಬಾರಿ ಉಚತವಾಗಿ ಎಟಿಎಂನಿಂದ ಹಣ ಪಡೆಯಬಹುದಾಗಿದೆ. ಅನ್ಯ ಬ್ಯಾಂಕ್ ಗಳಲ್ಲಿ ಈ ಮಿತಿ ಮೂರು ವಹಿವಾಟಿಗೆ ಮಾತ್ರ ಸೀಮಿತವಾಗಿದೆ. ಮೆಟ್ರೋ ಸಿಟಿಗಳಲ್ಲದ ನಗರಗಳ ಗ್ರಾಹಕರು 5 ಬಾರಿ ಅನ್ಯ ಬ್ಯಾಂಕಿನಿಂದ ಉಚಿತವಾಗಿ ಹಣ ಡ್ರಾ ಮಾಡಬಹುದು.

ಬ್ಯಾಂಕ್ ನೀಡಿರುವ ಈ ಉಚಿತ ವ್ಯವಹಾರಳಿಗಿಂತ ಹೆಚ್ಚು ಬಾರಿ ಎಟಿಎಂ ಬಳಕೆಯಾದ್ರೆ ಪ್ರತಿ ಬಳಕೆಗೆ 21 ರೂ. ಶುಲ್ಕ ವಿಧಿಸಲಾಗುತ್ತದೆ. ಹೆಚ್ಚಿನ ವಿನಿಮಯ ಸರಿದೂಗಿಸಿಕೊಳ್ಳಲು ಈ ನಿಯಮ ತರಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಹಳೆಯ ನಿಯಮಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಬ್ಯಾಂಕ್ ಸ್ಪಷ್ಟನೆ ನೀಡಿದೆ.