ನಾಸಿಕ್ : ಕರೋನಾ ವೈರಸ್ ಲಸಿಕೆಯ ಅಡ್ಡಪರಿಣಾಮಗಳ ವರದಿಗಳ ನಡುವೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಎರಡನೇ ಡೋಸ್ ಕರೋನಾ ಲಸಿಕೆ ತೆಗೆದುಕೊಂಡ ನಂತರ ಲೋಹ ಮತ್ತು ಉಕ್ಕಿನ ವಸ್ತುಗಳು ವ್ಯಕ್ತಿಯ ದೇಹಕ್ಕೆ ಅಂಟಿಕೊಳ್ಳುತ್ತಿವೆ ಎಂದು ಹೇಳಲಾಗುತ್ತಿದೆ. ಅಂದರೆ, ಮನುಷ್ಯನ ದೇಹವು ಆಯಸ್ಕಾಂತದಂತೆ ವರ್ತಿಸುತ್ತಿದೆ ಎನ್ನಲಾಗುತ್ತಿದೆ.
ನಗರದ ಶಿವಾಜಿ ಚೌಕ್ ಪ್ರದೇಶದ ನಿವಾಸಿ ಅರವಿಂದ್ ಜಗನ್ನಾಥ್ ಸೋನಾರ್ (71) ಕೋವಿಶೀಲ್ಡ್ ಎರಡನೇ ಡೋಸ್ ಲಸಿಕೆಯನ್ನು ಜೂನ್ 2 ರಂದು ಪಡೆದುಕೊಂಡಿದ್ದರು. ಅಂದಿನಿಂದ ಈ ದೇಹದಲ್ಲಿ ಈ ಕಾಂತೀಯ ಶಕ್ತಿ ಬಂದಿದೆ ಎಂದು ಅವರೇ ಹೇಳುತ್ತಿದ್ದಾರೆ. ಮೊದಲಿಗೆ ಕುಟುಂಬಸ್ಥರು ಬೆವರಿನಿಂದಾಗಿ ಈ ಎಲ್ಲಾ ವಸ್ತುಗಳು ದೇಹದಲ್ಲಿ ಅಂಟಿಕೊಂಡಿವೆ ಎಂದು ಭಾವಿಸಿದ್ದರು, ಆದರೆ ಅನೇಕ ಬಾರಿ ಇದೇ ರೀತಿಯಾದಗ ಅನುಮಾನ ಸೃಷ್ಟಿಯಾಗಿದೆ.
ಈ ವಿಷಯ ಬೆಳಕಿಗೆ ಬಂದ ನಂತರ ರಾಜ್ಯ ಆರೋಗ್ಯ ಸಚಿವ ರಾಜೇಶ್ ತೋಪೆ ಅವರು ತನಿಖೆಗೆ ಆದೇಶಿಸಿದ್ದಾರೆ. ಈ ವಿಚಾರದಲ್ಲಿ ಸತ್ಯ ಏನು ಎಂದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಇದರ ಹಿಂದೆ ವೈದ್ಯಕೀಯ ಕಾರಣವಿರಲಿ ಅಥವಾ ಇನ್ನೇನಾದರೂ ಇರಲಿ, ಈ ಸತ್ಯ ಶೀಘ್ರದಲ್ಲೇ ಹೊರಬರಬೇಕು ಎಂದು ಅವರು ಹೇಳಿದ್ದಾರೆ.
ಅರವಿಂದ್ ಜಗನ್ನಾಥ್ ಸೋನಾರ್ ಅವರ ಪುತ್ರ ದೆಹಲಿಯಲ್ಲೈ ವ್ಯಕ್ತಿಯೊಬ್ಬರ ದೇಹಕ್ಕೆ ಲೋಹಗಳು ಅಂಟುತ್ತಿರುವುದು ಯೂಟ್ಯೂಬ್ ವೀಡಿಯೊವೊಂದರಲ್ಲಿ ನೋಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಕರೋನಾ ಲಸಿಕೆಯ ಎರಡನೇ ಡೋಸ್ ನಂತರ ಅವನೂ ಮ್ಯಾಗ್ನೆಟ್ ಮನುಷ್ಯನಂತೆ ಮಾರ್ಪಟ್ಟಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾನೆ.

ಈ ವಿಚಿತ್ರ ಅನುಭವದ ವೀಡಿಯೋ ಮಾಡಿ ನಾಸಿಕ್ ಜಿಲ್ಲಾಡಳಿತಕ್ಕೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಹೀಗೆ ವೈರಲ್ ಆಗಿರುವ ವೀಡಿಯೊದಲ್ಲಿ, ಮನೆಯಲ್ಲಿ ಬಳಸುವ ಚಮಚಗಳು, ಲ್ಯಾಡಲ್, ಸಣ್ಣ ಫಲಕಗಳು ಮತ್ತು ಸಣ್ಣ ಪಾತ್ರೆಗಳು ದೇಹಕ್ಕೆ ಅಂಟಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ವಿಡಿಯೋ ಸ್ವೀಕರಿಸಿದ ನಂತರ, ಜಿಲ್ಲಾಡಳಿತ ವೈದ್ಯರ ತಂಡವೂ ಬುಧವಾರ ಪರೀಕ್ಷೆ ಆರಂಭಿಸಿದೆ. ಇದೊಂದು ಸಂಶೋಧನೆಯ ವಿಷಯವಾಗಿದೆ ಮತ್ತು ಅದರ ಬಗ್ಗೆ ಈ ಹಂತದಲ್ಲಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ವೈದ್ಯರು ಹೇಳಿದ್ದಾರೆ.