ಕೋಲ್ಕತ್ತಾ: ಚುನಾವಣೆಯಲ್ಲಿ ಆಡಿದ ಮಾತುಗಳಂತೆ ಸಿಎಂ ಮಮತಾ ಬ್ಯಾನರ್ಜಿ ‘ಖೇಲಾ ಹೋಬೆ’ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಲ್ಲಿ ಪ್ರತಿ ಕ್ಲಬ್ ಗಳಿಗೆ ಸರ್ಕಾರದಿಂದ ಉಚಿತವಾಗಿ ಫುಟ್ ಬಾಲ್ ನೀಡಲಾಗುತ್ತದೆ.
ರಾಜ್ಯದ ಯುವಕರನ್ನು ಫುಟ್‍ಬಾಲ್ ನತ್ತ ಸೆಳೆಯಲು ಈ ಯೋಜನೆ ತರುತ್ತಿರೋದಾಗಿ ಸರ್ಕಾರ ಹೇಳಿದೆ. ಯುವಕರಿಗೆ ಕ್ಲಬ್ ಗಳ ಮೂಲಕ ಫುಟ್‍ಬಾಲ್ ನೀಡಲಾಗವುದು. ಈ ಮೂಲಕ ಯುವ ಜನತೆ ಫುಟ್‍ಬಾಲ್ ಆಡುವ ಅವಕಾಶಗಳು ಸಿಗಲಿವೆ.

ಇನ್ನು ಚುನಾವಣೆ ಪ್ರಚಾರದ ವೇಳೆ ಮಮತಾ ಬ್ಯಾನರ್ಜಿ ಫುಟ್‍ಬಾಲ್ ಹಿಡಿದು ಕುಳಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅಂದು ವೀಲ್ ಚೇರ್ ಮೇಲೆ ಕುಳಿತೇ ಫುಟ್‍ಬಾಲ್ ಗೆ ಕಿಕ್ ಕೊಟ್ಟ ವೀಡಿಯೋ ಹಲವು ವಿಧವಾಗಿ ಶೀರ್ಷಿಕೆಯೊಂದಿಗೆ ಶೇರ್ ಆಗಿತ್ತು.