ಪ್ರಭಾವಿ ವ್ಯಕ್ತಿಯ ರೆಸಾರ್ಟ್ ಆರಂಭಕ್ಕೆ ಬ್ರೇಕ್ ಹಾಕಿದ್ರು?
ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ರೋಹಿಣಿ ಸಿಂಧೂರಿ ಅವರ ಪರ ಪೋಸ್ಟ್ ಗಳು ವೈರಲ್ ಆಗುತ್ತಿದ್ದು, ರಾಜಕೀಯ ನಾಯಕರಿಗೆ ಮೈಸೂರಿನ ಜನತೆ ಛೀಮಾರಿ ಹಾಕುತ್ತಿದ್ದಾರೆ. ಆದ್ರೆ ಮೇಲ್ನೋಟಕ್ಕೆ ಶಿಲ್ಪಾ ನಾಗ್ ಆರೋಪಗಳು ರೋಹಿಣಿ ಸಿಂಧೂರಿ ವರ್ಗಾವಣಗೆ ಕಾರಣ ಎಂದು ಸರ್ಕಾರ ಕೈತೊಳೆದುಕೊಂಡಿದೆ. ಆದ್ರೆ ಜೂನ್ ಮೊದಲ ವಾರದಲ್ಲಿ ರೋಹಿಣಿ ಸಿಂಧೂರಿ ಹೊರಡಿಸಿದ ಎರಡು ಆದೇಶಗಳು ಅವರ ವರ್ಗಾವಣೆಗೆ ಕಾರಣ ಅನ್ನೋ ಮಹತ್ವದ ವಿಷಯ ಬೆಳಕಿಗೆ ಬಂದಿದೆ.

ಆ ಎರಡು ಆದೇಶಗಳು:
- ಆದೇಶ 1: ಲಿಂಗಾಬುಧಿ ಕೆರೆಯ ಅಂಗಳದ ಸಮೀಪ ಪ್ರಭಾವಿ ವ್ಯಕ್ತಿಯೊಬ್ಬರು ರೆಸಾರ್ಟ್ ಆರಂಭಿಸುವ ಕಾರ್ಯಕ್ಕೆ ರೋಹಿಣಿ ಸಿಂಧೂರಿ ಬ್ರೇಕ್ ಹಾಕಿದ್ದರು. ಲಿಂಗಾಬುಧಿ ಗ್ರಾಮದ ಸರ್ವೇ ನಂಬರ್ 124/2 ರಲ್ಲಿ 1.39 ಏಕರೆಯ ಭೂ ಪರಿವರ್ತನೆ ರದ್ದು ಕುರಿತು ಆದೇಶ ಹೊರಡಿಸಿದ್ದರು.
- ಆದೇಶ 2: ಕೇರ್ಗಳಿ ಗ್ರಾಮದ ಸರ್ವೇ ನಂಬರ್ 155ರ 50 ಏಕರೆಗೂ ಹೆಚ್ಚಿನ ಜಮೀನಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನೀಡಿರುವ ಪರಿಹಾರ ವಿಚಾರದಲ್ಲಿ ಹಲವು ಆರೋಪಗಳು ಕೇಳಿ ಬಂದಿದ್ದವು. ಈ ಸಂಬಂಧ ಸಹ ತನಿಖೆಗೆ ರೋಹಿಣಿ ಸಿಂಧೂರಿ ಆದೇಶಿಸಿದ್ದರು.