ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಎರಡನೇ ಅಲೆ ಬಹುತೇಕ ಅಂತ್ಯವಾಗಿದ್ದು ಸೋಂಕಿತರ ಚಿಕಿತ್ಸೆ ತೆರೆಯಲಾಗಿದ್ದ ಕೊವೀಡ್ ಕೇರ್ ಸೆಂಟರ್ ಗಳು ಸಂಪೂರ್ಣ ಖಾಲಿಯಾಗುತ್ತಿವೆ.

ಎಲ್‌ಎನ್‌ಜೆಪಿ ಆಸ್ಪತ್ರೆ ಬಳಿ ಇರುವ ಶೆಹ್ನೈ ಬಾಂಕೆಟ್ ಹಾಲ್ ಕೋವಿಡ್ ಕೇರ್ ಸೆಂಟರ್ ಇಂದು ಸಂಪೂರ್ಣ ಖಾಲಿಯಾಗಿದೆ. ಮೂರು ಮಂದಿ ರೋಗಿಗಳು ಡಿಸ್ಚಾರ್ಜ್ ಆದ ಬಳಿಕ ಕೊವೀಡ್ ಕೇರ್ ಸೆಂಟರ್ ಖಾಲಿಯಾಗಿದ್ದು ಪರಿಕರಗಳನ್ನು ಪ್ಯಾಕ್ ಮಾಡಲಾಗುತ್ತಿದೆ.

ದೆಹಲಿಯಲ್ಲಿ ನಿತ್ಯ 300 ಪ್ರಕರಣಗಳು ಸರಾಸರಿ ಪತ್ತೆಯಾಗುತ್ತಿದ್ದು ಪಾಸಿಟಿವಿಟಿ ಪ್ರಮಾಣ 0.44%ಕ್ಕೆ ಇಳಿಕೆಯಾಗಿದೆ. ನಿತ್ಯ ಸುಮಾರು 40 ಮಂದಿ ಸಾವನ್ನಪ್ಪಿತ್ತಿದ್ದು ಈ ಪ್ರಮಾಣವೂ ಹಂತ ಹಂತವಾಗಿ ಕಡಿಮೆಯಾಗುತ್ತಿದೆ.

ಈವರೆಗೂ ದೆಹಲಿಯಲ್ಲಿ 14,29,791 ಮಂದಿಗೆ ಸೋಂಕು ತಗುಲಿದ್ದು ಈವರೆಗೂ 14,00,161 ಗುಣಮುಖಗೊಂಡಿದ್ದಾರೆ. ಒಟ್ಟು 24668 ಮಂದಿ ಸಾವನ್ನಪ್ಪಿದ್ದು 4962 ಸಕ್ರಿಯ ಪ್ರಕರಣಗಳಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.