ಎಸ್‍ಐಟಿ ತನಿಖೆಗೆ ಮುಖ್ಯಸ್ಥರೇ ಇಲ್ವಾ?
ಬೆಂಗಳೂರು: ಸಿಡಿ ಕೇಸ್ ಹೊಸ ಟ್ವಿಸ್ಟ್ ಸಿಕ್ಕಿದ್ದು, ಸಂತ್ರಸ್ತೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಹೈಕೋರ್ಟ್ ಮೇಲ್ವಿಚಾರಣೆಯಲ್ಲಿಯೇ ತನಿಖೆ ನಡೆಸಲು ಹೊಸ ತಂಡ ರಚನೆ ಮಾಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ಏನಿದೆ?: ಗೃಹ ಸಚಿವರು ಮಾರ್ಚ್ 10, 2021ರಂದು ನಗರ ಪೊಲೀಸ್ ಆಯುಕ್ತರಿಗೆ ಪ್ರಕರಣದ ತನಿಖೆಗೆ ಎಸ್‍ಐಟಿ ರಚನೆ ಮಾಡುವಂತೆ ಪತ್ರ ಬರೆದಿದ್ದರು. ಈ ಪತ್ರದನ್ವಯ ಮಾರ್ಚ್ 11ರಂದು ಎಸ್‍ಐಟಿ ರಚನೆ ಮಾಡಿತ್ತು. ಆದ್ರೆ ಈ ತಂಡದ ತನಿಖೆಯನ್ನ ರದ್ದುಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ಆರೋಪಿ ಗೃಹ ಸಚಿವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.

ಅತ್ಯಾಚಾರ ಪ್ರಕರಣಕ್ಕೂ ಮುನ್ನ ರಮೇಶ್ ಜಾರಕಿಹೊಳಿ ಬ್ಲ್ಯಾಕ್‍ಮೇಲ್ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಆರೋಪಿಗಳಾದ ನರೇಶ್ ಗೌಡ ಮತ್ತು ಶ್ರವಣ್‍ಗೆ ನಗರದ 91ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ. ಎಸ್‍ಐಟಿ ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಿತ್ತು.
ಎಸ್‍ಐಟಿ ತನಿಖೆಗೆ ಮುಖ್ಯಸ್ಥರೇ ಇಲ್ವಾ?: ಇನ್ನು ಅತ್ಯಾಚಾರದ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‍ಐಟಿ ತಂಡಕ್ಕೆ ಮುಖ್ಯಸ್ಥರೇ ಇಲ್ವಾ ಪಶ್ನೆಯೊಂದು ಮುನ್ನಲೆ ಬಂದಿದೆ. ಸರ್ಕಾರ ಸುವೇಂದು ಮುಖರ್ಜಿ ಅವರನ್ನ ಎಸ್‍ಐಟಿ ತಂಡಕ್ಕೆ ಮುಖ್ಯಸ್ಥರನ್ನಾಗಿ ನೇಮಿಸಿತ್ತು. ಆದ್ರೆ ಸುವೇಂದು ಮುಖರ್ಜಿ ಸುದೀರ್ಘ ರಜೆಯಲ್ಲಿರೋದು ಅನುಮಾನಕ್ಕೆ ಕಾರಣವಾಗಿದೆ. ತನಿಖೆಯಲ್ಲಿ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಮುಖರ್ಜಿ ರಜೆ ಮೇಲೆ ತೆರಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.