ನವದೆಹಲಿ: ಪುಣೆಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಹೊಸ ಕೋವಿಡ್-19 ರೂಪಾಂತರವಾದ ಬಿ.1.1.28.2ನ್ನು ಕಂಡು ಹಿಡಿದಿದೆ. ಈ ರೂಪಾಂತರಿ ವಿರುದ್ಧವೂ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ವರದಿಯಾಗಿದೆ.

ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಈ ರೂಪಾಂತರಿ ಸೋಂಕಿಗೆ ಒಳಗಾದ ಸೋಂಕಿತ ರೋಗಿಯಲ್ಲಿ ತೂಕ ಇಳಿಯುವಿಕೆ, ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತು ವೈರಲ್ ಇನ್‍ಫೆಕ್ಷನ್ ಉಂಟಾಗುತ್ತದೆ. ಈ ಎಲ್ಲದರ ವಿರುದ್ಧ ಕೋವ್ಯಾಕ್ಸಿನ್ ಕೆಲಸ ಮಾಡಲಿದೆ. ಇದರ ಕುರಿತ ವರದಿಯನ್ನು ಬಯೋಆರ್,ಎಕ್ಸ್ ಐವಿಯಲ್ಲಿ ಪ್ರಕಟಿಸಲಾಗಿದೆ.

ಎರಡು ಡೋಸ್ ಪಡೆದ ವ್ಯಕ್ತಿಯ ದೇಹದಲ್ಲಿ ಕೋವ್ಯಾಕ್ಸಿನ್ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ಸೋಂಕಿನವಿರುದ್ಧ ಪ್ರತಿಬಂಧಕಾಯಕವಾಗಿ ಕೋವ್ಯಾಕ್ಸಿನ್ ಕಾರ್ಯ ನಿರ್ವಹಿಸುತ್ತದೆ.