ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ಲಸಿಕೆಯ ಎರಡು ಡೋಸ್ ಪಡೆದವರಲ್ಲಿ ಆಂಟಿಬಾಡಿ (ಪ್ರತಿಕಾಯ) ಉತ್ಪತ್ತಿಯಾಗದ ವರದಿ ಬೆಳಕಿಗೆ ಬಂದಿದೆ.
ಮೆಡಿಕಲ್ ಕಾಲೇಜಿನ ಬ್ಲಡ್ ಆಂಡ್ ಟ್ರಾನ್ಸ್ ಫ್ಯೂಜನ್ ಡಿಪಾರ್ಟ್ ಮೆಂಟ್ ನಡೆಸಿದ ಸ್ಕ್ರೀನಿಂಗ್ ನಲ್ಲಿ ಶೇ.7ರಷ್ಟು ಜನರಲ್ಲಿ ವ್ಯಾಕ್ಸಿನ್ ಪಡೆದ್ರೂ ಆಂಟಿಬಾಡಿ ಉತ್ಪತ್ತಿಯಾಗಿಲ್ಲ. ಈ ವರದಿ ನೋಡಿ ಅಧ್ಯಯನ ತಂಡದ ಸದಸ್ಯರೇ ಚಕಿತರಾಗಿದ್ದಾರೆ. ಸದ್ಯ ಅಧ್ಯಯನ ತಂಡ ಆಂಟಿಬಾಡಿ ಹೆಚ್ಚಾಗದ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ.
ಕಿಂಗ್ ಜಾರ್ಜ್ ಚಿಕಿತ್ಸಾ ವಿಶ್ವವಿದ್ಯಾಲಯದ ಬ್ಲಡ್ ಆಂಡ್ ಟ್ರಾನ್ಸ್ ಫ್ಯೂಜನ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುವ ಹೆಲ್ತ್ ವರ್ಕರ್ ಸ್ಯಾಂಪಲ್ ಪಡೆದುಕೊಂಡು ಅಧ್ಯಯನ ನಡೆಸಲಾಗಿತ್ತು. ದೇಶದಲ್ಲಿ ಮೊದಲ ಸ್ಕ್ರೀನಿಂಗ್ ಟೆಸ್ಟ್ ಇದಾಗಿದೆ. ಇದುವರೆಗೂ ಸಾವಿರಕ್ಕೂ ಅಧಿಕ ಜನರನ್ನು ಸ್ಕ್ರೀನಿಂಗ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನೂ 4 ಸಾವಿರ ಜನರ ಮೆಡಿಕಲ್ ಚೆಕಪ್ ನಡೆಸಬೇಕಿದೆ.
ಪರೀಕ್ಷೆಗೆ ಒಳಗಾದವರ ಪೈಕಿ ಶೇ.7ರಷ್ಟು ಜನರಲ್ಲಿ ಆಂಟಿಬಾಡಿ ಉತ್ಪತ್ತಿಯಾಗಿಲ್ಲ. ಆದ್ರೆ ಈ ಕುರಿತ ಅಧ್ಯಯನ ಇನ್ನೂ ನಡೆಯುತ್ತಿದೆ. ಇದಕ್ಕೆ ಹಾರ್ಮೋನಲ್ ಕಾರಣ ಇರಬಹುದಾ ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.