‘ನಶೆ ಮಾಡಬೇಡ’ ಎಂಬ ಹಾಡು ಆನಂದ್ ಆಡಿಯೋದಲ್ಲಿ ರಿಲೀಸ್ ಆಗಿ ಸದ್ದು ಮಾಡ್ತಿದೆ. ಉತ್ಸಾಹಿ ಯುವಕರ ತಂಡ ‘ನಶೆ ಮಾಡಬೇಡ’ ಎಂಬ ಸಾಹಿತ್ಯದೊಂದಿಗೆ ವಿಭಿನ್ನವಾಗಿ ಹಾಡನ್ನ ಹೊರತಂದಿದ್ದಾರೆ. ಬೆಂಗಳೂರಿನ ಹೊಂಗಸಂದ್ರದ ಉದಯೋನ್ಮುಖ ಪ್ರತಿಭೆ, ಬಾಡಿ ಬಿಲ್ಡರ್ ಅಶೋಕ್ ಕುಮಾರ್ ಎಚ್.ಎನ್ ಈ ಹಾಡಿನಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ನಾಯಕಿಯಾಗಿ ಹಾಸನ ಜಿಲ್ಲೆಯ ಬೇಲೂರಿನ ಅಂಕಿತಾ ಕಾಣಿಸಿಕೊಂಡಿದ್ದಾರೆ.

ಈ ನಶೆ ಹಾಡಿಗೆ ಗಾಯಕ ರಾಹುಲ್ ಡಿಟ್ಟೋ ಸಂಗೀತ ಮತ್ತು ಸಾಹಿತ್ಯ ನೀಡಿದ್ದಾರೆ, ಚೀಯಾನ್ ಡೆವಿಲ್ ನಿರ್ದೇಶನ ಮಾಡಿದ್ದಾರೆ. ಸಮಾಜ ಸೇವಕ ಸೋಮಶೇಖರ್ ಹೆಚ್.ಎನ್ ನಿರ್ಮಾಣದಲ್ಲಿ ಮೂಡಿರುವ ಹಾಡು ಇದಾಗಿದೆ.
ನಶೆಯಲ್ಲಿ ಜೀವನ ವ್ಯರ್ಥ, ನಮ್ಮ ಸೋಲುಗಳನ್ನ ಸಂಭ್ರಮಿಸಲು ಜನಗಳು ಕಾಯುತ್ತಿರುತ್ತಾರೆ. ಅದಕ್ಕಾದರೂ ನಶೆ ಮಾಡಬೇಡ ಎನ್ನುವ ಸಾಲುಗಳು ಈ ಹಾಡಿನಲ್ಲಿ ತಿಳಿಸಿದ್ದಾರೆ.