ಬೆಂಗಳೂರು(ಜೂನ್ 5) : ಕಣ್ಣಲ್ಲಿ ನೂರಾರು ಕನಸನ್ನು ಹೊತ್ತು ಹಳ್ಳಿಯಿಂದ ಬಸ್ ಹಿಡಿದ್ರೆ..ಬಂದಿಳಿಯುವುದೆ ಎಲ್ಲಾರನ್ನ ಅಪ್ಪಿಕೊಳ್ಳುವ, ಜೀವನದ ಪಾಠ ಕಲಿಸುವ, ಬದುಕು ಹೇಳಿಕೊಡುವ ಮಾಯಾನಗರಿ ಬೆಂಗಳೂರಿಗೆ. ಆದರೆ, ಕೊರೊನಾ ಬಂದ ನಂತರ ಬೆಂಗಳುರು ಬೇಡವಾಯ್ತು. ಈ ಊರನ್ನು ಕಡೆಗಣಿಸಿ, ಬೈದು ಹೊಂಟವರು ಅನೇಕರು. ಇಂತಹವರಿಗೆ ಬೆಂಗಳೂರಿನ ಹಿರಿಮೆಯನ್ನು ಸಾರುವ ಉದ್ದೇಶದಿಂದ ಯುವ ಸಾಹಿತಿ ತಿಮ್ಮೇಗೌಡ ‘ಡೋಂಟ್ ಬ್ಲೇಮ್ ಬೆಂಗಳೂರು’ ಎಂಬ ಹಾಡನ್ನು ಬರೆದು, ಸಂಗೀತ ಸಂಯೋಜಿಸಿದ್ದಾರೆ. ಈ ಹಾಡು ಸಂಜೆ 6 ಗಂಟೆಗೆ ಬಿಡುಗಡೆಯಾಗಿದೆ.

ಇಂದು ಸಂಜೆ 6 ಗಂಟೆಗೆ ಮೈಸೂರಿನ ಆರ್.ಜೆ. ಸುನೀಲ್ ಪ್ರಾಂಕ್ ಕಾಲ್ಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆಗಿದ್ದು, ಜೀವನ ಕೊಟ್ಟ ಬೆಂಗಳೂರನ್ನು ಬೈದು ಹೊಂಟವರಿಗೆ, ಆ ಊರಿನ ಹೃದಯ ಎಂತಹದ್ದು ಎಂದು ಹೇಳುವ ಮೂಲಕ ಭರವಸೆ ಮೂಡಿಸುವ ಅರ್ಥವನ್ನು ಈ ಹಾಡು ಒಳಗೊಂಡಿದೆ.
ಈ ಹಾಡಿಗೆ ಗಾಯಕ ಅಶ್ವಿನ್ ಶರ್ಮ ಧ್ವನಿ ನೀಡಿದ್ದಾರೆ. ಪಂಕಜ್ ಅವರು ಸಂಗೀತ ನಿರ್ಮಾಣ ಮಾಡಿದ್ದು, ಕ್ರಿಯೇಟಿವ್ ಹೆಡ್ ಆಗಿ ಅಭಿಷೇಕ್, ಎಡಿಟಿಂಗ್‌ನಲ್ಲಿ ಕಿರಣ್, ಪ್ರೋಡಕ್ಷನ್ ವಿನ್ಯಾಸವನ್ನು ಮಮತಾ ಮಾರ್ದಲ ಜತೆಯಾಗಿ ಕಾರ್ಯನಿರ್ವಹಿಸಿದ್ದಾರೆ.
ಕನ್ನಡದ ಯುವ ಸಾಹಿತಿಯ ಈ ಹಾಡಿಗೆ ಸ್ಯಾಂಡಲ್‌ವುಡ್ ಬೆಂಬಲ ಸೂಚಿಸಿದೆ. ಸಂಗೀತ ನಿರ್ದೇಶಕ ವಿ.ಮನೋಹರ್, ನಟ ಮಂಡ್ಯ ರಮೇಶ್, ಹಿನ್ನೆಲೆ ಗಾಯಕಿ ಅನನ್ಯಾ ಭಟ್ ಸೇರಿದಂತೆ ಅನೇಕರು ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.