ಬೆಂಗಳೂರು : ಜೂನ್ 7ರ ಬಳಿಕವೂ ಲಾಕ್ಡೌನ್ ವಿಸ್ತರಣೆ ಮಾಡುವ ಲೆಕ್ಕಚಾದಲ್ಲಿರುವ ರಾಜ್ಯ ಸರ್ಕಾರ ಮತ್ತೊಂದು ಹಂತದಲ್ಲಿ ಆರ್ಥಿಕ ಪ್ಯಾಕೇಜ್ ಬಿಡುಗಡೆ ಮಾಡಲು ನಿರ್ಧರಿಸಿದೆ. ಇಂದು ಸಂಜೆ ಸಿಎಂ ಬಿ.ಎಸ್ ಯಡಿಯೂರಪ್ಪ ಸುದ್ದಿಗೋಷ್ಟಿ ಕರೆದಿದ್ದು ಈ ಸಂಧರ್ಭದಲ್ಲಿ ಎರಡನೇ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.
ಮಾಹಿತಿಗಳ ಪ್ರಕಾರ ಇಂದು ಬಿಡುಗಡೆಯಾಗಲಿರುವ ಎರಡನೇ ಪ್ಯಾಕೇಜ್ 500 ಕೋಟಿ ಮೊತ್ತದಾಗಿದ್ದು, ಮೀನುಗಾರರು, ಅನುದಾನಿತ ಶಿಕ್ಷಕರು, ಪತ್ರಿಕಾ ವಿತರಕರು, ಅಡುಗೆ ಭಟ್ಟರು, ಆರ್ಚಕರು, ಸಿನಿ ಕಾರ್ಮಿಕರು, ಹೋಟೆಲ್ ಕಾರ್ಮಿಕರಿಗೆ ನೆರವು ಸಿಗಬಹುದು ಎನ್ನಲಾಗುತ್ತಿದೆ.

ಮೊದಲ ಹಂತದಲ್ಲಿ 1250 ಕೋಟಿ ಮೊತ್ತದ ಪ್ಯಾಕೇಜ್ ಬಿಡುಗಡೆ ಮಾಡಿದ ಸರ್ಕಾರ ಹಲವು ವರ್ಗಗಳನ್ನು ಮೊದಲ ಹಂತದಲ್ಲಿ ಸೇರಿರಲಿಲ್ಲ. ವ್ಯಾಪಕ ಒತ್ತಡ ವ್ಯಕ್ತವಾದ ಬಳಿಕ ಎರಡನೇ ಪ್ಯಾಕೇಜ್ ಮೂಲಕ ಈ ವರ್ಗದ ಜನರಿಗೂ ನೆರವು ನೀಡುವ ಮನಸ್ಸು ಸರ್ಕಾರ ಮಾಡಿದೆ.
ಇನ್ನು ಲಾಕ್ಡೌನ್ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಸಚಿವರ ಜೊತೆಗೆ ಸಿಎಂ ಬಿಎಸ್‌ವೈ ಚರ್ಚೆ ಮಾಡಿದ್ದಾರೆ. ಬಹುತೇಕ ಮಂದಿ ಜೂನ್ 7 ರ ಬಳಿಕ ಮತ್ತೊಂದು ವಾರ ಲಾಕ್ಡೌನ್ ವಿಸ್ತರಿಸಲು ಸಲಹೆ ನೀಡಿದ್ದು, ಬಹುತೇಕ ಲಾಕ್ಡೌನ್ ವಿಸ್ತರಣೆಯಾಗಲಿದೆ.
ಆದರೆ ಜೂನ್ 7 ರ ಬಳಿಕ ಕೈಗಾರಿಕಾ ಚಟುವಟಿಕೆಗಳಿಗೆ ಅವಕಾಶ ನೀಡಲು ಸರ್ಕಾರ ಚಿಂತಿಸಿದ್ದು ಉತ್ಪಾದನಾ ವಲಯಕ್ಕೆ ಅನುಮತಿ ಸಿಗುವ ನಿರೀಕ್ಷೆಗಳಿದೆ. ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತಗಳಿಗೆ ಸಂಪೂರ್ಣ ಸ್ವತಂತ್ರ ನೀಡುವ ಸಾಧ್ಯತೆಗಳು ಇದೆ.