ಬೆಂಗಳೂರು : ವಿಶ್ವದ ಅನೇಕ ಶ್ರೇಷ್ಠ ಭಾಷೆಗಳ ಪೈಕಿ ಕನ್ನಡವೂ ಒಂದು. ಇದನ್ನು ಭಾಷೆಗಳ ರಾಣಿ ಅಂತಲೂ ಕರೆಯಲಾಗುತ್ತೆ. ಇಂತಹ ಐತಿಹಾಸಿಕ, ಚಾರಿತ್ರಿಕ ಹಿನ್ನಲೆ ಇರುವ ಭಾಷೆಗೆ ಅಪಮಾನ ಮಾಡುವ ಪ್ರಯತ್ನ ನಡೆದಿದೆ. ಗೂಗಲ್ ದುರ್ಬಳಕೆ ಮಾಡಿಕೊಂಡು ಕನ್ನಡ ಭಾಷೆಗೆ ಅವಮಾನ ಮಾಡುವ ಹೀನ ಕೃತ್ಯ ನಡೆದಿದೆ.
ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಭಾರತ ಅತ್ಯಂತ ಕೆಟ್ಟ ಭಾಷೆ ಯಾವುದು ಎಂದು ಹುಡುಕಿದರೆ ಅದು ಕನ್ನಡ ಅಂತಾ ಫಲಿತಾಂಶ ಲಭ್ಯವಾಗುತ್ತಿದೆ. ಈ ರೀತಿಯಾಗಿ ಫಲಿತಾಂಶ ಬರುವಂತೆ ದುರುದ್ದೇಶ ಪೂರ್ವಕವಾಗಿ ಕೀ ವರ್ಡಿಂಗ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
#Kannada #federalism #dignity pic.twitter.com/qwaeL1zjT3
— Chetan Kumar / ಚೇತನ್ (@ChetanAhimsa) June 3, 2021
ಗೂಗಲ್ ನಲ್ಲಾಗಿರುವ ಈ ಮಹಾ ಪ್ರಮಾದದ ವಿರುದ್ಧ ಈಗ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. ಸದ್ಯ ಈ ಪ್ರಮಾದವನ್ನು ಗೂಗಲ್ ಗಮನಕ್ಕೆ ತರಲು ಫೀಡಬ್ಯಾಕ್ ಅಭಿಯಾನ ನಡೆಯುತ್ತಿದ್ದು ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೂ ಬಹಳಷ್ಟು ಜನರು ಈ ವಿಚಾರವನ್ನು ರಿಪೊರ್ಟ್ ಮಾಡುತ್ತಿದ್ದಾರೆ.
ಹೀಗೆ ಕನ್ನಡಿಗರು, ಭಾಷಾಭಿಮಾನಿಗಳು ಸರಣಿ ರಿಪೋರ್ಟ್ ಮಾಡಿದ ಬೆನ್ನಲೆ ಗೂಗಲ್ ಕೂಡಾ ಎಚ್ಚೇತ್ತುಕೊಂಡಿದ್ದು ಗೂಗಲ್ ನಿಂದ ಈ ಕಂಟೆಂಟ್ ಅನ್ನು ಡಿಲಿಟ್ ಮಾಡಿದೆ.
Home to the great Vijayanagara Empire, #Kannada language has a rich heritage, a glorious legacy and a unique culture. One of the world’s oldest languages Kannada had great scholars who wrote epics much before Geoffrey Chaucer was born in the 14th century. Apologise @GoogleIndia. pic.twitter.com/Xie927D0mf
— P C Mohan (@PCMohanMP) June 3, 2021
ಇಂಟರ್ನೆಟ್ ದುನಿಯಾದಲ್ಲಿ ಕರ್ನಾಟಕದ ಪಾತ್ರ ದೊಡ್ಡದಿದೆ. ಬೆಂಗಳೂರು ಐಟಿ ಸಿಟಿ, ಸಿಲಿಕಾನ್ ಸಿಟಿ ಅಂತಲೂ ಕರೆಸಿಕೊಳ್ಳುತ್ತೆ. ಲಕ್ಷಾಂತರ ಹೊರನಾಡಿನ ಟೆಕ್ಕಿಗಳಿ ಅನ್ನ ಹಾಕುತ್ತಿದೆ. ಆದರೆ ಹೀಗೆ ಬೇರೆ ರಾಜ್ಯದಿಂದ ಬೆಂಗಳೂರಿಗೆ ಬಂದ ಟೆಕ್ಕಿಗಳಿಂದಲ್ಲೇ ಇಂತದೊಂದು ಹೀನ ಕೆಲಸ ಆಗಿರಬಹದು ಎಂದು ಅನುಮಾನಿಸಲಾಗಿದೆ.