ನವದೆಹಲಿ : ಎರನಡೇ ಅಲೆಯಲ್ಲಿ ಭಾರತಕ್ಕೆ ಅಪ್ಪಳಿಸಿರುವ ಕೊರೊನಾ ವೈರಸ್ ಸಾವಿರಾರು ಮಕ್ಕಳ ಪೊಷಕರನ್ನು ಕಿತ್ತುಕೊಂಡು ಅನಾಥರಾಗಿಸಿದೆ. ಇದಕ್ಕೆ ಸಂಬಂಧಿಸಿದಂತೆ ಈಗ ಅಂಕಿ ಅಂಶಗಳು ಪ್ರಕಟವಾಗಿದೆ.
ಪೊಷಕರನ್ನು ಕಳೆದುಕೊಂಡ ಮಕ್ಕಳಿಗೆ ನೆರವು ನೀಡುವ ಉದ್ದೇಶದ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ಗೆ ರಾಷ್ಟ್ರೀಯ ಮಕ್ಕಳ ಆಯೋಗ ಅಂಕಿ ಅಂಶಗಳೊಂದಿಗೆ ಅಫಿಡೆವಿಟ್ ಸಲ್ಲಿಸಿದೆ.

ಈ ಮಾಹಿತಿ ಪ್ರಕಾರ ದೇಶದಲ್ಲಿ ಕೊರೊನಾದಿಂದ 9356 ಮಕ್ಕಳು ಪೊಷಕರನ್ನು ಕಳೆದುಕೊಂಡಿದ್ದಾರೆ. ಇದರಲ್ಲಿ 4860 ಬಾಲಕರು, 4486 ಬಾಲಕಿಯರಿದ್ದಾರೆ. ವಯೋಮಾನದಲ್ಲಿ ವಿಗಂಡಿಸುವುದಾದರೇ 788 ಮಕ್ಕಳು ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು ಇದರಲ್ಲಿ ಹಸುಗೂಸುಗಳಿದೆ.
ಇನ್ನು 5226 ಮಕ್ಕಳು 4-13 ವಯಸ್ಸಿನ ನಡುವಿನ ಅಂತರದಲ್ಲಿದ್ದರೇ, 3,332 ಮಕ್ಕಳು 14 ರಿಂದ 17 ವಯಸ್ಸಿನವರು ಎಂದು ಆಯೋಗ ಹೇಳಿಕೊಂಡಿದೆ.
ಪೊಷಕರನ್ನು ಕಳೆದುಕೊಂಡ ಮಕ್ಕಳಿಗೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ರೀತಿಯಲ್ಲಿ ನೆರವು ನೀಡಿವೆ.