ನವದೆಹಲಿ: ಉಚಿತ ಕೊರೊನಾ ಲಸಿಕೆಗಾಗಿ ನೀವು ಧ್ವನಿ ಎತ್ತಿ, ಕೇಂದ್ರ ಸರ್ಕಾರ ಎಚ್ಚರಗೊಳ್ಳಲಿ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೋಶಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಆರಂಭಿಸಿದ್ದಾರೆ.
ದೇಶದಲ್ಲಿ ಪ್ರತಿದಿನ 20 ರಿಂದ30 ಲಕ್ಷ ಡೋಸ್ ಲಸಿಕೆ ನೀಡಲಾಗುತ್ತಿದೆ. ಈ ಲಸಿಕಾಕರಣ ಅತ್ಯಂತ ನಿಧಾನವಾಗಿ ಸಾಗುತ್ತಿದೆ. ಹಲವು ರಾಜ್ಯಗಳಲ್ಲಿ ಕೊರೊನಾ ಲಸಿಕೆಯೇ ಸಿಗುತ್ತಿಲ್ಲ. ಇದು ಕೇಂದ್ರ ಸರ್ಕಾರದ ವೈಫಲ್ಯ ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.
कोरोना महामारी के ख़िलाफ़ सबसे मज़बूत सुरक्षा कवच सिर्फ़ वैक्सीन है।
— Rahul Gandhi (@RahulGandhi) June 2, 2021
देश के जन-जन तक मुफ़्त टीकाकरण पहुँचाने के लिए आप भी आवाज़ उठाइये- केंद्र सरकार को जगाइये!#SpeakUpForFreeUniversalVaccination pic.twitter.com/SEFhwokfSU
ಕೊರೊಮಾ ವಿರುದ್ಧದ ಹೋರಾಟದಲ್ಲಿ ಲಸಿಕೆಯೊಂದೇ ರಕ್ಷಾಕವಚ. ಹಾಗಾಗಿ ಸರ್ಕಾರ ದೇಶದ ಜನತೆಗೆ ಉಚಿತವಾಗಿ ಲಸಿಕೆ ನೀಡಬೇಕು. ನೀವು ಸಹ ನಿಮ್ಮ ಧ್ವನಿಯನ್ನ ಎತ್ತಿ ಕೇಂದ್ರ ಸರ್ಕಾರವನ್ನ ಎಚ್ಚರಗೊಳಿಸಿ ಎಂದು #SpeakUpForFreeUniversalVaccination ಹ್ಯಾಶ್ ಟ್ಯಾಗ್ ಬಳಸಿದ್ದಾರೆ.
ದೇಶದಲ್ಲಿಯ ಲಸಿಕೆ ಕೊರತೆಗೆ ಕೇಂದ್ರ ಸರ್ಕಾರದ ಎಡವಟ್ಟು ನಿರ್ಧಾರಗಳೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ನಿರ್ಧಾರಗಳಿಂದಲೇ ವ್ಯಾಕ್ಸಿನೇಷನ್ ನಿಧಾನವಾಗಿ ಸಾಗುತ್ತಿದೆ. ಲಸಿಕೆಗೆ ಮೂರು ಬೆಲೆ ನಿಗದಿ ಮಾಡಿ ರಾಜ್ಯ ಸರ್ಕಾರಗಳ ಮೇಲೆ ಆರ್ಥಿಕ ಭಾರ ಹಾಕಿತು. ಮೂರನೇ ಅಲೆ ಮಕ್ಕಳಿಗೆ ಅಪಾಯಕಾರಿ ಎನ್ನಲಾಗುತ್ತಿದ್ದು, ಕಾರಣ ಲಸಿಕಾಕರಣದ ವೇಗ ಹೆಚ್ಚಾಗಬೇಕಿದೆ ಎಂದು ಕಾಂಗ್ರೆಸ್ ಆಗ್ರಹಿಸಿದೆ.