ಮುಂಬೈ : ಕೊರೊನಾ ಸಂಜೀವಿನಿ ಕೋವ್ಯಾಕ್ಸಿನ್ ಉತ್ಪಾದನೆಗಾಗಿ ಮಹಾರಾಷ್ಟ್ರದ ಹಫ್ಕಿನ್ ಬಯೋಫಾರ್ಮಾಗೆ 159 ಕೋಟಿ ರೂ. ಅನುದಾನ ನೀಡಲಾಗಿದೆ.
ಹಫ್ಕಿನ್ ಬಯೋಫಾರ್ಮಾ (Haffkine BioPharmaceutical Corporation Ltd) ಮಹಾರಾಷ್ಟ್ರ ಸರ್ಕಾರದ ಒಡೆತನದಲ್ಲಿದೆ. ಇದು ಭಾರತ್ ಬಯೋಟೆಕ್ ಜೊತೆಯಲ್ಲಿ ಟೆಕ್ನಾಲಜಿನ ಟ್ರಾನ್ಸಫರ್ ವ್ಯವಸ್ಥೆಯಲ್ಲಿ ಕೋವ್ಯಾಕ್ಸಿನ್ ಲಸಿಕೆಯನ್ನ ಉತ್ಪಾದಿಸುತ್ತಿದೆ. ಕೋವ್ಯಾಕ್ಸಿನ್ ಉತ್ಪಾದನೆಯನ್ನ ಹೆಚ್ಚಿಸಲು ಕೇಂದ್ರ ಸರ್ಕಾರ 65 ಕೋಟಿ ಮತ್ತು ಮಹಾರಾಷ್ಟ್ರ ಸರ್ಕಾರ 94 ಕೋಟಿ ರೂಪಾಯಿ ಅನುದಾನ ನೀಡಿವೆ.

ಎಂಟು ತಿಂಗಳಲ್ಲಿಯೇ ನಮಗೆ ನೀಡಿದ ಟಾಸ್ಕ್/ಗುರಿಯನ್ನು ತಲುಪುತ್ತೇವೆ. ಲಸಿಕೆಯ ಉತ್ಪಾದನೆಯನ್ನ ಸಮರೋಪಾದಿಯಲ್ಲಿ ಆರಂಭಿಸಲಿದ್ದೇವೆ ಎಂದು ಹಫ್ಕಿನ್ ಬಯೋಫಾರ್ಮಾದ ಮ್ಯಾನೇಜಿಂಗ್ ಡೈರೆಕ್ಟರ್ ಡಾಸಂದೀಪ್ ರಾಠೋಡ್ ಹೇಳಿದ್ದಾರೆ.
Haffkine BioPharmaceutical Corporation Ltd 122 ವರ್ಷದಷ್ಟು ಹಳೆಯದಾದ ಔಷಧ ಉತ್ಪದನಾ ಕಂಪನಿ. ದೇಶದ ಹಳೆಯ ಔಷಧ ಕಂಪನಿಗಳಲ್ಲಿ ಇದೊಂದಾಗಿದೆ. ರಷ್ಯಾದ ಬ್ಯಾಕ್ಟಿರಿಯಾಲಿಜಿಸ್ಟ್ ಡಾ.ವಾಲ್ಡ್ಮೇರ್ ಹಫ್ಕಿನ್ ಅವರ ಹೆಸರನ್ನ ಈ ಬಯೋಫಾರ್ಮಾಗೆ ಇಡಲಾಗಿದೆ. ಈ ಕಂಪನಿ ಪ್ಲೇಗ್ ಗೆ ಔಷಧಿಯನ್ನು ಕಂಡು ಹಿಡಿದಿತ್ತು.