ಚಂಡೀಗಢ: ಪಂಜಾಬ್ ಕಾಂಗ್ರೆಸ್ ನಲ್ಲಿ ಸಂಚಲನ ಉಂಟಾಗಿದ್ದು, ಸಿಎಂ ವಿರುದ್ಧ ದೂರು ಸಲ್ಲಿಸಲು 25 ‘ಕೈ’ ಶಾಸಕರು ದೆಹಲಿ ತಲುಪಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಪಂಜಾಬಿನ ಎಲ್ಲ ಶಾಸಕರು ಮತ್ತು ಸಚಿವರನ್ನು ದೆಹಲಿಗೆ ಆಹ್ವಾನಿಸಿದೆ. ಈ ಎಲ್ಲ ಜನಪ್ರತಿನಿಧಿಗಳು ಮೂರು ಸದಸ್ಯರ ಸಮಿತಿ ಮುಂದೆ ತಮ್ಮ ಸಮಸ್ಯೆಗಳನ್ನು ಇರಿಸಲಿದೆ. ಈಗಾಗಲೇ 25 ಶಾಸಕರು ಸಿಎಂ ಕ್ಯಾಪ್ಟರ್ ಅಮರಿಂದರ್ ಸಿಂಗ್ ವಿರುದ್ಧ ಸಲ್ಲಿಕೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಪೂರ್ಣ ಮಾಡಲು ಸರ್ಕಾರ ವಿಫಲವಾಗಿದೆ. ಇದು ಮುಂದಿನ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ತಮ್ಮ ಸರ್ಕಾರದ ವಿರುದ್ಧವೇ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಈ ಶಾಸಕರ ತಂಡದಲ್ಲಿ ಸಚಿವರಾದ ಚರಣ್‍ಜಿತ್ ಚನ್ನಿ, ಸುಖ್‍ಜಿಂದರ್ ಸಿಂಗ್ ರಾಧಾವಾ ಮತ್ತು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಝಾಖಡಾ ಸಹ ಇದ್ದಾರೆ.
ಪಂಜಾಬ್ ಮುಂದಿನ ವರ್ಷದ ಆರಂಭದಲ್ಲಿಯೇ ಚುನಾವಣೆ ಎದುರಿಸಲಿದೆ. ಹಾಗಾಗಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇಷ್ಟುದಿನ ತೆರೆಯ ಹಿಂದೆ ನಾಯಕರು ಮುನ್ನಲೆಗೆ ಬರುತ್ತಿದ್ದು, ತಮ್ಮ ಇರುವಿಕೆಯನ್ನ ಖಚಿತ ಮಾಡುತ್ತಿದ್ದಾರೆ. ಅದೇ ರೀತಿ ಚುನಾವಣೆ ಲಾಬಿಗಳು ಸಹ ಆರಂಭಗೊಂಡಿವೆ.