ಚೀನಾ : ಭವಿಷ್ಯದಲ್ಲಿ ಜನಸಂಖ್ಯೆ ಕುಸಿತದ ಭೀತಿಯಲ್ಲಿರುವ ಚೀನಾದ ಕಮ್ಯೂನಿಸ್ಟ್ ಸರ್ಕಾರ ತನ್ನ ಫ್ಯಾಮಿಲಿ ಫ್ಲ್ಯಾನಿಂಗ್ ನೀತಿಯನ್ನು ಬದಲಿಸಿದೆ. ಇನ್ಮುಂದೆ ವಿವಾಹಿತ ದಂಪತಿಗಳು ಮೂರು ಮಕ್ಕಳನ್ನು ಹೊಂದಬಹುದು ಎಂದು ಮಹತ್ವದ ಘೋಷಣೆ ಮಾಡಿದೆ.
China said that married couples may have up to three children, a policy shift from the existing limit of two after recent data showed a decline in births in the country: Reuters
— ANI (@ANI) May 31, 2021
ಚೀನಾ 2016ಕ್ಕೂ ಮುನ್ನ ಸುಮಾರು 40 ವರ್ಷಗಳ ಕಾಲ ಒಂದು ಮಗುವಿನ ನೀತಿ ಜಾರಿ ತಂದಿತ್ತು. ಇದೇ ಮಾದರಿಯ ಪಾಲಿಸಿಗಳನ್ನು ಹಲವು ದೇಶಗಳು ಜನಸಂಖ್ಯೆ ನಿಯಂತ್ರಣಕ್ಕಾಗಿ ಅನುಸರಿಸಿದ್ದವು. ಆದರೆ ಚೀನಾ ಈಗ ಜನ ಸಂಖ್ಯೆ ಕುಸಿತದ ಸಮಸ್ಯೆ ಎದುರಿಸುತ್ತಿದೆ.
ಈ ಹಿನ್ನಲೆ 2016 ರಲ್ಲಿ ಎರಡು ಮಕ್ಕಳನ್ನು ಹೊಂದಲು ಅವಕಾಶ ನೀಡಲಾಗಿತ್ತು. ಅದಾಗ್ಯೂ ಜನರ ಜೀವನ ಶೈಲಿ ಮತ್ತು ಶಿಕ್ಷಣ ಮಟ್ಟ ಹೆಚ್ಚಳವಾಗಿರುವ ಹಿನ್ನಲೆ ಹೆಚ್ಚು ಮಕ್ಕಳನ್ನು ಪಡೆಯಲು ಯುವ ಸಮುದಾಯ ಮುಂದಾಗುತ್ತಿಲ್ಲ. ಈ ಹಿನ್ನಲೆ ಚೀನಾ ಮತ್ತೊಮ್ಮೆ ತನ್ನ ನೀತಿಯನ್ನು ಬದಲಿಸಿದ್ದು ಮೂರು ಮಕ್ಕಳಿಗೆ ಮೀತಿಯನ್ನು ಹೆಚ್ಚಿಸಿದೆ.

2020 ರಲ್ಲಿ ಚೀನಾದ ವಾರ್ಷಿಕ ಜನನಗಳು ದಾಖಲೆಯ ಕನಿಷ್ಠ 12 ದಶಲಕ್ಷಕ್ಕೆ ಇಳಿದಿದೆ ಎಂದು ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಕಳೆದ ತಿಂಗಳು ಹೇಳಿದ್ದು, ಚೀನಾದಲ್ಲಿ ಯುವಕರ ಬದಲು ವೃದ್ದರ ಸಂಖ್ಯೆ ಹೆಚ್ಚುತ್ತಿದೆ ಇದರಿಂದ ಭವಿಷ್ಯದಲ್ಲಿ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಗಳಿದೆ ಎಂದು ಎಚ್ಚರಿಸಲಾಗಿದೆ.