ನವದೆಹಲಿ : ಕೊರೋನಾ ಸಂಕಷ್ಟ ಕಾಲದಲ್ಲಿರುವ ಜನರಿಗೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮೂಲಕ ನಿತ್ಯವೂ ಕೇಂದ್ರ ಸರ್ಕಾರ ಶಾಕ್ ನೀಡುತ್ತಿದೆ. ಇಂದು ಇಂಧನಗಳ ಬೆಲೆ ಏರಿಸುವ ಮೂಲಕ ಸರ್ಕಾರ ದಾಖಲೆ ಬರೆದಿದ್ದು, ಒಂದೇ ತಿಂಗಳಲ್ಲಿ 16 ಬಾರಿ ಇಂಧನ ದರಗಳನ್ನು ಪರಿಷ್ಕೃರಿಸಿದೆ.
ಇಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 22 ಪೈಸೆ, ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ 29 ಪೈಸೆ ಹಚ್ಚಳವಾಗಿದೆ. ಇಂಧನದ ನಿರಂತರ ಬೆಲೆ ಏರಿಕೆಯಿಂದ ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ 100 ಗಡಿ ದಾಟಿದೆ.

ಜೈಪುರದಲ್ಲಿ ಪೆಟ್ರೋಲ್‌ಗೆ 100.75 ರೂ, ಡೀಸೆಲ್ 93.95 ರೂ ಇದ್ದರೇ ಮುಂಬೈನಲ್ಲಿ ಪೆಟ್ರೋಲ್ 100.47 ರೂ., ಡೀಸೆಲ್ 92.45 ರೂ.ಬೆಲೆ ನಿಗಧಿಯಾಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ 97.37 ರೂ., ಡೀಸೆಲ್ 90.27 ರೂ.ಗೆ ಮಾರಾಟವಾಗುತ್ತಿದೆ.
ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಿಂದ ಪರೋಕ್ಷವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ಕೊರೊನಾ ಸಂಧರ್ಭದಲ್ಲಿ ಆದಾಯವಿಲ್ಲದೇ ಪರದಾಡುತ್ತಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.