ನವದೆಹಲಿ : ಕೊರೊನಾ ಸೋಂಕಿನ ಹೊರೆತಾಗ್ಯೂ ಜನರು ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು ಕೊರೊನಾದಿಂದ ಗುಣವಾದ ಬಳಿಕ ಆಪರೇಷನ್ ಮಾಡಿಸಿಕೊಳ್ಳಬೇಕೇ, ಬೇಡ್ವೆ.? ಎನ್ನುವ ಗೊಂದಲದಲ್ಲಿದ್ದಾರೆ.
ಈ ಗೊಂದಲಗಳಿಗೆ ಭಾರತೀಯ ವಿಜ್ಞಾನ ಸಂಸ್ಥೆ ( ಐಸಿಎಂಆರ್ ) ಸ್ಪಷ್ಟನೆ ನೀಡಿದ್ದು, ಕೊರೊನಾದಿಂದ ಗುಣಮುಖವಾದ ಬೆನ್ನಲೆ ಆಪರೇಷನ್ ಸರಿಯಲ್ಲ, ಆರ್‌ಟಿಪಿಸಿಆರ್ ನೆಗೆಟಿವ್ ವರದಿಯ ಕನಿಷ್ಠ ಆರು ವಾರದ ಬಳಿಕ ಆಪರೇಷನ್ ಮಾಡಿಸುವುದು ಸೂಕ್ತ ಎಂದು ತಿಳಿಸಿದೆ.

ತುರ್ತು ಅಲ್ಲದ ಆಪರೇಷನ್‌ಗಳಿದ್ದಲ್ಲಿ ಅವುಗಳನ್ನು ಕಡ್ಡಾಯವಾಗಿ ಮುಂದೂಡಿ, ತೀರಾ ಅವಶ್ಯಕತೆ ಇದ್ದಲ್ಲಿ ನಿಗಧಿತ ಅವಧಿಯ ಬಳಿಕ ಆಪರೇಷನ್ ಮಾಡಿಸಿಕೊಳ್ಳಬಹುದು ಎಂದು ಅದು ಸೂಚಿಸಿದೆ.
ಆದರೆ ನೆಗೆಟಿವ್ ವರದಿ ಬಳಿಕ 102 ದಿನಗಳ ಬಳಿಕ ದೇಹದಿಂದ ಸಂಪೂರ್ಣ ವೈರಸ್ ನಾಶವಾಗಲಿದೆ, ಅಲ್ಲಿಯ ವರೆಗೂ ದೇಹದಲ್ಲಿ ಕೊರೊನಾ ಸೋಂಕಿನ ಸತ್ತ ಅವಶೇಷಗಳಿರುತ್ತವೇ ಈ ಅವಧಿಯ ಬಳಿಕ ಆಪರೇಷನ್ ಮಾಡಿಸುವುದು ಸೂಕ್ತ ಎಂದು ಐಸಿಎಂಆರ್ ಹೇಳಿದೆ.

ಆಪರೇಷನ್‌ಗೆ ಸಂಬಂಧಿಸಿದಂತೆ ಕೆಲವು ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಯಾರು, ಯಾವಗ ಆಪರೇಷನ್ ಮಾಡಿಸಬಹುದು ಎಂದು ಐಸಿಎಂಆರ್ ತಿಳಿಸಿದೆ.
• ರೋಗ ಲಕ್ಷಣಗಳಿಲ್ಲದವರು, ಸೌಮ್ಯ ಲಕ್ಷಣಗಳಿರುವ ಸೋಂಕಿತರು ಅಥಾವ ಉಸಿರಾಟದ ಸಮಸ್ಯೆಗಳಿಲ್ಲದ ರೋಗಿಗಳು ಕೊರೊನಾದಿಂದ ಚೇತರಿಸಿಕೊಂಡ ನಾಲ್ಕು ವಾರಗಳ ಬಳಿಕ ಆಪರೇಷನ್ ಮಾಡಿಸಬಹುದು
• ಕೊರೊನಾ ಸಂದರ್ಭದಲ್ಲಿ ಕೆಮ್ಮು, ಉಸಿರಾಟದ ಸಮಸ್ಯೆ ಸೇರಿ ಇತರೆ ತೊಂದರೆ ಕಂಡು ಬಂದವರು ಆರು ವಾರಗಳ ಕಾಲ ಆಪರೇಷನ್ ಮಾಡಿಸುವಂತಿಲ್ಲ
• ಡಯಾಬಿಟಿಸ್, ಇಮ್ಯುನೊಕೊಪ್ರೊಮೈಸ್ಡ್ ಅಥವಾ ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳು ಎಂಟು ರಿಂದ 10 ವಾರಗಳು ಬಳಿಕ ಶಸ್ತ್ರಚಿಕಿತ್ಸೆಗೆ ಒಳಪಡಬಹುದು
• ಇನ್ನು ಕೋವಿಡ್ ನಿಂದ ಐಸಿಯುಗೆ ದಾಖಲಾದ ರೋಗಿಗಳು ಕನಿಷ್ಠ ಹನ್ನೆರಡು ವಾರಗಳ ಬಳಿಕ ಆಪರೇಷನ್ ಮಾಡಿಸಬಹುದು ಅಥಾವ ಅದಕ್ಕಿಂತ ಹೆಚ್ಚು ಸಮಯವಾದರೂ ಉತ್ತಮ.