ಬೆಂಗಳೂರು : ಲಾಕ್ಡೌನ್ ನಿಯಮಗಳ ನಡುವೆ ಸ್ಯಾಂಡಲ್‌ವುಂಡ್ ನಟಿ ಪ್ರಣಿತಾ ಸುಭಾಷ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ನಿತಿನ್ ರಾಜು ಎನ್ನುವವರ ಜೊತೆಗೆ ನಿನ್ನೆ ಸಪ್ತಪದಿ ತುಳಿದಿದ್ದಾರೆ.

ಕೊರೊನಾ ಲಾಕ್ಡೌನ್ ನಿಯಮಗಳ ಜಾರಿ ಹಿನ್ನಲೆ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿರುವ ಪ್ರಣಿತಾ ಮದುವೆ ವಿಚಾರವನ್ನು ಇನ್ನು ಅಧಿಕೃತವಾಗಿ ಬಹಿರಂಗಗೊಳಿಸಿಲ್ಲ.

ಮದುವೆಯಲ್ಲಿ ಭಾಗವಹಿದಿದ್ದ ಕೆಲವು ಆಪ್ತರು ತಮ್ಮ ಸೋಶಿಯಲ್ ಮಿಡಿಯಾಗಳಲ್ಲಿ ಪ್ರಣಿತಾ ವಿವಾಹ ಪೊಟೊಗಳನ್ನು ಶೇರ್ ಮಾಡಿಕೊಂಡಿದ್ದು ಇವು ವೈರಲ್ ಆಗಿವೆ. ಪ್ರಣಿತಾ ವಿವಾಹ ಸುದ್ದಿ ಕೇಳಿರುವ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ನಿತಿನ್, ಉದ್ಯಮಿಯಾಗಿದ್ದು ಬೆಂಗಳೂರಿನಲ್ಲಿರುವ ಮಾಲ್‌ವೊಂದರ ಮಾಲೀಕರು ಹೌದು ಎನ್ನಲಾಗಿದೆ. ಈ ಹಿಂದೆಯೇ ಅದ್ದೂರಿ ವಿವಾಹಕ್ಕೆ ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು. ಆದರೆ ಲಾಕ್ಡೌನ್‌ನಿಂದ ಅದು ಸಾಧ್ಯವಾಗಿಲ್ಲ.