ನವದೆಹಲಿ: ಕೆಲ ಸ್ಟಾರ್ ಹೋಟೆಲ್ ಗಳು ಗ್ರಾಹಕರನ್ನ ಆಕರ್ಷಿಸಲು ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಕೊರೊನಾ ವ್ಯಾಕ್ಸಿನೇಷನ್ ಘೋಷಿಸಿವೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಟಾರ್ ಹೋಟೆಲ್ ಗಳಲ್ಲಿ ವ್ಯಾಕ್ಸಿನೇಷನ್ ಪ್ಯಾಕೇಜ್ ಸಂಬಂಧ ಕೇಂದ್ರ ಸರ್ಕಾರ ಶನಿವಾರ ನೋಟಿಸ್ ಜಾರಿ ಮಾಡಿದೆ. ಖಾಸಗಿ ಆಸ್ಪತ್ರೆಗಳು ಹೋಟೆಲ್ ಗಳು ಸಹಯೋಗದೊಂದಿಗೆ ವ್ಯಾಕ್ಸಿನ್ ನೀಡೋದು ಮತ್ತು ಪ್ಯಾಕೇಜ್ ಗೆ ಸಹಕರಿಸೋದು ರಾಷ್ಟ್ರೀಯ ಕೋವಿಡ್-19 ಲಸಿಕಾಕರಣ ಕಾರ್ಯಕ್ರಮದ ಉಲ್ಲಂಘನೆ.
Hotels offering #COVID19Vaccination packages shall face strict legal action!
— Dr Harsh Vardhan (@drharshvardhan) May 29, 2021
Such activities are in contravention to rules under the Nat’l COVID vaccination program and must cease immediately.#LargestVaccineDrive @MoHFW_INDIA pic.twitter.com/e5AIVfnl7z
ರಾಷ್ಟ್ರೀಯ ಕೋವಿಡ್-19 ಲಸಿಕಾಕರಣ ಕಾರ್ಯಕ್ರಮದ ಪ್ರಕಾರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅಥವಾ ಸರ್ಕಾರ ನಿಯೋಜಿಸಿರುವ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಬೇಕು. ಅದು ನೇರವಾಗಿ ಜನತೆಗೆ ತಲುಪಬೇಕೇ ಹೊರಯ ಮಧ್ಯವರ್ತಿಗಳ ಮೂಲಕ ಅಲ್ಲ ಎಂದು ಕೇಂದ್ರ ಸರ್ಕಾರ ನೋಟಿಸ್ ನಲ್ಲಿ ಹೇಳಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.
ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಹರ್ಷವರ್ಧನ್, ಸ್ಟಾರ್ ಹೋಟೆಲ್‍ಗಳು ವ್ಯಾಕ್ಸಿನ್ ಪ್ಯಾಕೇಜ್ ಘೋಷಿಸಿರೋದು ದೌರ್ಭಾಗ್ಯ. ಕೆಲ ಆಸ್ಪತ್ರೆಗಳು ಖಾಸಗಿ ಹೋಟೆಲ್ ಗಳ ಜೊತೆ ಸೇರಿ ಪ್ಯಾಕೇಜ್ ಘೋಷಿಸಿವೆ. ಈ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳಲಗುವುದು ಎಂದು ತಿಳಿಸಿದ್ದಾರೆ.