ನವದೆಹಲಿ: ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾಗಿ ಇಂದಿಗೆ ಏಳು ವರ್ಷ. ಕೊರೊನಾ ಸಂಕಷ್ಟ ಹಿನ್ನೆಲೆ ಸಂಭ್ರಮಾಚರಣೆ ನಡೆಸಬಾರದು. ಕಾರ್ಯಕರ್ತರು ಸಮಾಜ ಸೇವೆಗಳಲ್ಲಿ ತೊಡಗಿಕೊಳ್ಳಬೇಕೆಂದು ಬಿಜೆಪಿ ನಿರ್ದೇಶನ ನೀಡಿದೆ.

ಇಂದು ಒಂದು ಲಕ್ಷದ ಗ್ರಾಮಗಳಿಗೆ ಸಂಸದರು, ಕೇಂದ್ರ ಸಚಿವರು, ಶಾಸಕರು ಭೇಟಿ ನೀಡಬೇಕು. ಕನಿಷ್ಠ ಎರಡೂ ಗ್ರಾಮಗಳಲ್ಲಿ ಕೊರೊನಾಗೆ ಸಂಬಂಧಿಸಿದ ವಿಶೇಷ ಅಭಿಯಾನ ಆರಂಭಿಸಬೇಕು. ಕಾರ್ಯಕರ್ತರು ಫೇಸ್ ಶೀಲ್ಡ್, ಮಾಸ್ಕ್, ಸ್ಯಾನಿಟೈಸರ್, ಆಕ್ಸಿಮೀಟರ್ ಉಚಿತವಾಗಿ ನೀಡಬೇಕು.
ಉಚಿತ ಶಿಕ್ಷಣ, ವಿಮೆ, ಪರಿಹಾರ – ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಪ್ರಧಾನಿ ಮೋದಿ ನೆರವುhttps://t.co/u3pilp36gY#bsyediyurappa #kannadanews #seculartv
— Secular TV (@SecularTVKannad) May 29, 2021
ಏಳು ವರ್ಷ ಪೂರೈಸಿದ ಹಿನ್ನೆಲೆ ಇಂದು ದೇಶದಾದ್ಯಂತ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ಸುಮಾರು 50 ಸಾವಿರ ಜನರ ರಕ್ತದಾನ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ.