ಬೆಂಗಳೂರು: ಸಿಲಿಕಾನ್ ಸಿಟಿಯ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗ್ಯಾಂಗ್‍ರೇಪ್ ಪ್ರಕರಣದ ಸಂತ್ರಸ್ಥೆ ತನ್ನ ಹೇಳಿಕೆ ದಾಖಲಿಸಿದ್ದಾರೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ಥೆಯ ಹೇಳಿಕೆಯನ್ನು ಸಿಆರ್ ಪಿಸಿ 161 ಅಡಿಯಲ್ಲಿ ದಾಖಲಿಸಿಕೊಂಡಿದ್ದಾರೆ.
ಸಂತ್ರಸ್ಥೆ ಹೇಳಿದ್ದೇನು?:
ನಾನು ಮೊದಲು ದುಬೈನಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡಿಕೊಂಡಿದ್ದೆ. ಆರೋಪಿಗಳ ಪರಿಚಯದ ನಂತ್ರ ಡಾಕಾದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದೆ. ಹಣಕಾಸಿನ ವಿಚಾರವಾಗಿ ನನ್ನ ಅತ್ಯಾಚಾರ ನಡೆಯಿತು. ನನಗೆ ಯಾರೂ ಪೋಷಕರು ಇಲ್ಲ. ಘಟನೆ ಬಳಿಕ ಕೇರಳದಲ್ಲಿರೋ ಗೆಳೆಯನಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಆತ ಬೆಂಗಳೂರಿನಲ್ಲಿರೋದು ಬೇಡ ಎಂದು ಹೇಳಿ ಕೇರಳಕ್ಕೆ ಕರೆಸಿಕೊಂಡನು.
ಅತ್ಯಾಚಾರದ ವೇಳೆ ಒಬ್ಬಳು ಮಹಿಳೆ ಇದ್ದಳು ಅಂತಾನೂ ಯುವತಿ ಹೇಳಿದ್ದಾರೆ. ಸದ್ಯ ಸಂತ್ರಸ್ಥೆಯ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.