ನವದೆಹಲಿ : ಕೊರೊನಾ ಸೋಂಕಿನಿಂದ ತಂದೆ ತಾಯಿ ಅಥಾವ ಪೊಷಕರನ್ನ ಕಳೆದುಕೊಂಡ ಮಕ್ಕಳಿಗೆ ಪಿಎಂ ಕೇರ್ಸ್‌ನಡಿ ನೆರವು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
Govt to ensure free education for children who lost their parents to COVID-19: PMO
— Press Trust of India (@PTI_News) May 29, 2021
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಮಕ್ಕಳಿಗೆ 18 ವರ್ಷದವರೆಗೂ ಸಂಪೂರ್ಣ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದೆ. ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಮಾಸಿಕ ಶಿಷ್ಯ ವೇತನ ನೀಡುವುದಾಗಿ ಸರ್ಕಾರ ಹೇಳಿದೆ.
Children having lost parents to COVID-19 to get monthly stipend after turning 18, fund of Rs 10 lakh when they turn 23 from PM CARES Fund: PMO
— Press Trust of India (@PTI_News) May 29, 2021
ಇನ್ನು ಆಯುಷ್ಮಾನ್ ಯೋಜನೆಯಡಿಯಲ್ಲಿ 5 ಲಕ್ಷದ ವಿಮೆ ಕೂಡಾ ಸರ್ಕಾರ ನೀಡಲಿದ್ದು, , 18 ವರ್ಷದವರೆಗೂ ವಿಮೆ ಕಂತುಗಳನ್ನು ಪಿಎಂ ಕೇರ್ಸ್ ನಿಧಿಯಿಂದ ಭರಿಸಲು ನಿರ್ಧರಿಸಿದೆ. ಮಗು 23 ವರ್ಷಕ್ಕೆ ತಿರುಗಿದ ಬಳಿಕ ಸರ್ಕಾರದಿಂದ 10 ಲಕ್ಷ ಪರಿಹಾರ ನೀಡಲು ತಿರ್ಮಾನಿಸಿದ್ದು ಉನ್ನತ ಶಿಕ್ಷಣಕ್ಕೆ ಬ್ಯಾಂಕ್ ಲೋನ್ ಮೂಲಕ ಕೇಂದ್ರ ಸರ್ಕಾರ ಸಹಾಯ ಮಾಡಲಿದೆ.
Children having lost parents to COVID-19 will be assisted for higher education loan; interest to be paid from PM CARES Fund: PMO
— Press Trust of India (@PTI_News) May 29, 2021
ಈ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಮಕ್ಕಳು ದೇಶದ ಭವಿಷ್ಯ, ಇದು ನಮ್ಮ ಮಕ್ಕಳ ಭವಿಷ್ಯ ಉಜ್ವಲಿಸುವ ಪ್ರಯತ್ನ ಎಂದಿದ್ದಾರೆ.
Children represent future of India; We'll do everything to support, protect them: PM Narendra Modi
— Press Trust of India (@PTI_News) May 29, 2021