ದೇಶದಲ್ಲಿ ಕಳೆದ ವಾರದಿಂದ ಒಂದೇ ಚರ್ಚೆ ಅದು ಸೋಶಿಯಲ್ ಮೀಡಿಯಾ ಬ್ಯಾನ್ ಆಗುತ್ತಾ.? ಜನರ ಜೀವನದ ಅವಿಭಾಜ್ಯ ಅಂಗವಾಗಿರುವ ಫೇಸ್ಬುಕ್ ಟ್ವಿಟರ್ ವಾಟ್ಸಪ್ ಬಂದ್ ಆಗುತ್ತಾ? ಇಂತದೊಂದು ಸುದ್ದಿ ದೊಡ್ಡ ಪ್ರಮಾಣದ ಚರ್ಚೆ ಆಗಲು ಕಾರಣ ಕೇಂದ್ರ ಸರ್ಕಾರದ ಜಾರಿಗೆ ತಂದಿರುವ ಹೊಸ ಕಾನೂನುಗಳು. ಫೇಸ್ಬುಕ್, ಟ್ವಿಟರ್, ವಾಟ್ಸಪ್ ಸೇರಿದಂತೆ ಎಲ್ಲ ಮಾದರಿಯ ಸೋಶಿಯಲ್ ಮೀಡಿಯಾ ಮತ್ತು ಓಟಿಟಿ ಪ್ಲಾಟ್ ಫಾರಂಗಳಿಗೆ ಕೇಂದ್ರ ಸರ್ಕಾರ ಹೊಸ ಕಾನೂನು ಜಾರಿ ತಂದಿದ್ದು ಇವುಗಳನ್ನು ಪಾಲಿಸಲು ಸೋಶಿಯಲ್ ಮೀಡಿಯಾ ಸಂಸ್ಥೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಕೇಂದ್ರ ಸರ್ಕಾರದ ಹೊಸ ರೂಲ್ಸ್ ವಿರೋಧಿಸಿ ವಾಟ್ಸಪ್ ಕೋರ್ಟ್ ಮೊರೆ ಹೋದ್ರೆ ಗೂಗಲ್ ಫೇಸ್ಬುಕ್ ನಮ್ಮಿಗಿನ್ನು ಟೈಮ್ ಬೇಕು ಅಂತಾ ರಗಳೆ ಮಾಡ್ತಿದೆ. ಆದರೆ ಕೇಂದ್ರ ಮಾತ್ರ ದೇಶದ ಕಾನೂನು ಪಾಲಿಸುವುದಾದ್ರೆ ಇರಿ ಇಲ್ಲ ಜಾಗ ಖಾಲಿ ಮಾಡಿ ಅಂತಿದೆ ಹಾಗಿದ್ರೆ ಇಷ್ಟೊಂದು ದೊಡ್ಡ ಪ್ರಮಾಣದ ವಿವಾದಕ್ಕೆ ಕಾರಣವಾದ ಆ ಹೊಸ ಕಾನೂನುಗಳೇನು.? ಇವುಗಳನ್ನು ವಾಟ್ಸಪ್ ಟ್ವಿಟರ್, ಫೇಸ್ಬುಕ್ ವಿರೋಧ ಮಾಡ್ತಿರೋದ್ಯಾಕೆ? ಇಲ್ಲಿದೆ ನೋಡಿ ಮಾಹಿತಿ..

ಸೋಶಿಯಲ್ ಮೀಡಿಯಾ ಇವತ್ತಿನ ಕಾಲಕ್ಕೆ ಯಾರು ಬಳಸಲ್ಲ ಹೇಳಿ. ಮಕ್ಕಳಿಂದ ಮುದುಕರವರೆಗೂ ಎಲ್ಲರೂ ಸೋಶಿಯಲ್ ಮಿಡಿಯಾಗಳಲ್ಲಿ ಆಕ್ಟಿವ್ ಆಗಿದ್ದಾರೆ. ನಿತ್ಯ ಗುಡ್ ಮಾರ್ನಿಂಗ್ ನಿಂದ ಆರಂಭವಾಗುವ ಸೋಶಿಯಲ್ ಮೀಡಿಯಾ ಬಳಕೆ ಗುಡ್ ನೈಟ್ ನೊಂದಿಗೆ ಅಂತ್ಯವಾಗುತ್ತೆ. ಜನರು ತಮ್ಮ ಖುಷಿ ದುಃಖ ಎಲ್ಲವನ್ನೂ ಇಲ್ಲಿ ಮುಕ್ತವಾಗಿ ಹಂಚಿಕೊಳ್ತಾರೆ. ನಿಮ್ಮಗೆ ನೆನಪಿರಲಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಭವಿಷ್ಯವನ್ನು ನಿರ್ಧರಿಸುವುದ್ರಲ್ಲಿ ಇವುಗಳ ಪಾತ್ರ ಬಹಳ ಮಹತ್ವದಾಗಿದೆ.
ಗೂಗಲ್ ನೀಡುವ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಫೇಸ್ಬುಕ್ ಅನ್ನು 41 ಕೋಟಿ ಜನರು, ವಾಟ್ಸಪ್ ಅನ್ನು 53 ಕೋಟಿ, 18 ಕೋಟಿ ಜನರು ಇನ್ಸ್ಟಾಗ್ರಾಂ ಬಳಕೆ ಮಾಡುತ್ತಿದ್ದಾರೆ. ಟ್ವಿಟರನ್ನು 1.75 ಕೋಟಿ, ಕೂ ಅನ್ನು 60 ಲಕ್ಷ ಜನರು ಬಳಸುತ್ತಿದ್ದಾರೆ. ಇನ್ನು ಗೂಗಲ್ ಮೇಲೆ 76 ಕೋಟಿ ಜನರು ಅವಲಂಬಿಸಿದ್ದಾರೆ.

ಇಷ್ಟು ದೊಡ್ಡ ಪ್ರಮಾಣದ ಬಳಕೆದಾರರನ್ನು ಈ ಸೋಶಿಯಲ್ ಮಿಡಿಯಾ ಸಂಸ್ಥೆಗಳು ಇನ್ಯಾವುದೇ ದೇಶಗಳಲ್ಲಿ ಹೊಂದಿಲ್ಲ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಈ ಸಂಖ್ಯೆ ಹೆಚ್ಚಾಗಿರುವುದ್ರಲ್ಲಿ ಯಾವುದೇ ಅಚ್ಚರಿಗಳಿಲ್ಲ. ಆದರೆ ದಿನದಿಂದ ದಿನಕ್ಕೆ ಭಾರತದಲ್ಲಿ ಸೋಶಿಯಲ್ ಮಿಡಿಯಾಗಳಾದ ಫೇಸ್ಬುಕ್ ಟ್ವಿಟರ್ ವಾಟ್ಸಪ್ ಬಲಿಷ್ಠವಾಗುತ್ತಿವೆ. ಇವು ರಾಜಕೀಯ ಚರ್ಚೆಗಳ ವೇದಿಕೆಗಳಾಗಿವೆ. ಚುನಾವಣಾ ಭವಿಷ್ಯವನ್ನು ನಿರ್ಧರಿಸುತ್ತಿವೆ. ಅಲ್ಲದೇ ದೇಶದ ವ್ಯವಸ್ಥೆಯ ಕೈಗನ್ನಡಿಯಾಗಿವೆ.
ಹೀಗೆ ಬಲಿಷ್ಠವಾಗುತ್ತಿರುವ ಸೋಶಿಯಲ್ ಮಿಡಿಯಾಗಳಗಳನ್ನು ನಿಯಂತ್ರಣ ತರಲು ಸದ್ಯ ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ದೇಶದಲ್ಲಿ ಸೋಶಿಯಲ್ ಮಿಡಿಯಾಗಳನ್ನು ನಿಯಂತ್ರಿಸುವ ದೃಷ್ಟಿಯಿಂದ ಹೊಸ ಕಾನೂನುಗಳನ್ನು ರೂಪಿಸಿದೆ. ಈ ಹೊಸ ಕಾನೂನುಗಳೇ ವಿವಾದಕ್ಕೆ ಕಾರಣವಾಗಿದ್ದು, ಟ್ವಿಟರ್ ಈ ನಿಯಮಗಳು ವೈಯಕ್ತಿಕ ಸ್ವಾತಂತ್ರ್ಯಕ್ಕೆ ದಕ್ಕೆ ತರಲಿದೆ ಎಂದು ಹೇಳಿದರೇ ಫೇಸ್ಬುಕ್ ಮತ್ತಷ್ಟು ಸಮಯ ಬೇಕು ಎಂದಿದೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ವಾಟ್ಸಪ್ ಇವುಗಳನ್ನು ಪಾಲಿಸಲು ಸಾಧ್ಯವಿಲ್ಲ ಅಂತಾ ಕೇಂದ್ರಕ್ಕೆ ಸೆಡ್ಡು ಹೊಡೆದು ದೆಹಲಿ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಸೋಶಿಯಲ್ ಮೀಡಿಯಾಗಳು ಹೊಸ ಕಾನೂನು ಬಗ್ಗೆ ಹೇಳೊದೇನು ಅನ್ನೊದಕ್ಕಿಂತ ಮುಖ್ಯವಾಗಿ ಕೇಂದ್ರಸ ಹೊಸ ನಿಯಮಗಳು ಏನು ಇದು ಜಾರಿ ಆಗಿದ್ದು ಯಾವಗ ಎಂದು ಗಮನಿಸುವುದಾದರೆ..
• ಹೊಸ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮಗಳು 2021 ಅನ್ನು ಫೆಬ್ರುವರಿ 25ರಂದು ಸರ್ಕಾರ ಘೋಷಿಸಿತ್ತು. ಫೆಬ್ರುವರಿ 25ರಂದು ಸರ್ಕಾರ ಘೋಷಿಸಿತ್ತು.
• ಹೊಸ ನಿಮಯಗಳಲ್ಲಿ ಭಾರತದ ಸಾರ್ವಭೌಮತ್ವ, ರಾಜ್ಯದ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಯನ್ನು ಹಾಳುಮಾಡುವ ಮಾಹಿತಿಯ ‘ಮೂಲ’ವನ್ನು ಸಾಮಾಜಿಕ ಜಾಲತಾಣ ಕಂಪನಿಗಳು ಪತ್ತೆಹಚ್ಚಬೇಕು.
* ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುವ ಯಾವುದೇ ಸಂದೇಶವನ್ನು ಅಳಿಸುವಂತೆ ಸರ್ಕಾರದ ಅಧಿಕಾರಿಗಳು ಸೂಚನೆ ನೀಡಿದ 36 ಗಂಟೆಯೊಳಗೆ ಆಯಾ ಕಂಪನಿಗಳು ಅದನ್ನು ಕಾರ್ಯಗತಗೊಳಿಸಬೇಕು.
* ಈ ಕುರಿತ ದೂರುಗಳಿಗೆ ಸ್ಪಂದಿಸುವ ವ್ಯವಸ್ಥೆಯನ್ನು ಕಂಪನಿಗಳು ರೂಪಿಸಬೇಕು.
* ಅಶ್ಲೀಲತೆಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ತೆಗೆದುಹಾಕಲು ಸ್ವಯಂಚಾಲಿತ ವ್ಯವಸ್ಥೆ ಜಾರಿಗೊಳಿಸಬೇಕು.
* ಮುಖ್ಯ ದೂರು ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಕುಂದುಕೊರತೆ ನಿವಾರಣೆ ಅಧಿಕಾರಿಗಳನ್ನು ಕಂಪನಿಗಳು ಭಾರತದಲ್ಲಿ ನೇಮಿಸಿಕೊಳ್ಳಬೇಕು
• ಓಟಿಟಿ ಪ್ಲಾಟ್ ಫಾರಂಗಳು ಕೂಡಾ ಸೋಶಿಯಲ್ ಮಿಡಿಯಾ ಮಾದರಿಯಲ್ಲಿ ಸಮಿತಿಗಳನ್ನು ರಚಿಸಿಕೊಂಡು, ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡಬೇಕು
• ಕೇಂದ್ರ ಕೇಂದ್ರ ಸರ್ಕಾರ ಮಾಹಿತಿ ತಂತ್ರಜ್ಞಾನ ಮತ್ತು ಇಲೆಕ್ಟ್ರಾನಿಕ್ಸ್ ಇಲಾಖೆ ಈ ಎಲ್ಲ ಉಸ್ತುವಾರಿ ನೋಡಿಕೊಳ್ಳಲಿದೆ.
ಕೇಂದ್ರ ಸರ್ಕಾರ ಏನೋ ಈ ನಿಯಮಗಳನ್ನು ಜಾರಿಗೆ ತಂತು. ಆದರೆ ಈಗ ಸೋಶಿಯಲ್ ಮಿಡಿಯಾ ಸಂಸ್ಥೆಗಳು ಭಿನ್ನ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿವೆ. ಟ್ವಿಟರ್ ಆಕ್ಷೇಪ ವ್ಯಕ್ತಪಡಿಸಿದರೇ, ವಾಟ್ಸಪ್ ಕೋರ್ಟ್ ಮೆಟ್ಟಿಲೇರಿದೆ. ಉಳಿದ ಕಂಪನಿಗಳು ಹೊಸ ಕಾನೂನುಗಳು ಬಗ್ಗೆ ಏನು ಹೇಳಿವೆ. ವಾಟ್ಸಪ್ ಕೋರ್ಟ್ ನಲ್ಲಿ ಏನಂತ ವಾದ ಮಾಡ್ತಿದೆ ಎಂದು ನೋಡುವುದಾದರೆ…

ಎಲೆಕ್ಟ್ರಾನಿಕ್ಸ್ ಮತ್ತು ಇನಾರ್ಮೇಷನ್ಇನಾರ್ಮೇಷನ್ ಟೆಕ್ನಾಲಜಿ ಜಾರಿಗೆ ತಂದಿರುವ ಈ ನಿಯಮಗಳನ್ನು ಟ್ವಿಟರ್ ಒಪ್ಪಿಕೊಂಡಿಲ್ಲ. ಈ ಬಗ್ಗೆ ಸರಕಾರದ ಜೊತೆಗೆ ರಚನಾತ್ಮಕ ಚರ್ಚೆ ಮಾಡುವುದಾಗಿ ಅದು ಹೇಳಿದೆ. ಹೊಸ ಕಾನೂನುಗಳು ವಾಕ್ ಸ್ವಾತಂತ್ರ್ಯಕ್ಕೆ ದಕ್ಕೆ ತರಬಹುದು ಎಂದು ಟ್ವಿಟರ್ ಕಳವಳ ವ್ಯಕ್ತಪಡಿಸಿದೆ.
ಇನ್ನು ಫೇಸ್ಬುಕ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಹೊಸ ನಿಯಮಗಳು ಸಮಗ್ರವಾಗಿ ಅಧ್ಯಯನ ಮಾಡಲಾಗುವುದು ಮತ್ತು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಸ್ಥೆ ಬದ್ದ,ಹೊಸ ನಿಯಂತ್ರಣ ನಿಯಮಗಳು ಸ್ವಾಗತಿಸುತ್ತೇವೆ ಎಂದು ಹೇಳಿದೆ.
ಗೂಗಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚೈ ಇನ್ನು ಈ ಬಗ್ಗೆ ಮಾತನಾಡಿದ್ದು, ಪ್ರತಿಯೊಂದು ದೇಶದ ಸ್ಥಳೀಯ ಕಾನೂನುಗಳನ್ನು ಪಾಲಿಸಲು ಬದ್ಧರಾಗಿದ್ದೇವೆ ಮತ್ತು ಸರ್ಕಾರಗಳ ಜತೆ ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತೇವೆ’ ಎಂದು ಹೇಳಿದ್ದಾರೆ.
ಆದರೆ ಈ ಎಲ್ಲ ಕಂಪನಿಗಳಿಗಿಂತ ವಾಟ್ಸಪ್ ಭಿನ್ನ ನಿಲುವು ತಾಳಿದ್ದು ಕೇಂದ್ರದ ಹೊಸ ನಿಯಮಗಳನ್ನ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ತನ್ನ ಅರ್ಜಿಯಲ್ಲಿ ಈ ಕೆಳಕಂಡ ಅಂಶಗಳನ್ನು ಉಲ್ಲೇಖಿಸಿದೆ.
>ಕೇಂದ್ರ ಸರ್ಕಾರದ ನಿರ್ಧಿಷ್ಟ ವಿಷಯಗಳ ಪ್ರಸಾರಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ
>ಇದು ಬಳಕೆದಾರರ ಖಾಸಗಿತನದ ಹಕ್ಕುಗಳ ಉಲ್ಲಂಘನೆಯಾಗಲಿದೆ
>ಹೊಸ ನಿಯಮದ ಅಡಿ ಸರ್ಕಾರ ಬಯಸಿದರೆ ಪೊಸ್ಟ್ ಮಾಡಿದ ವ್ಯಕ್ತಿಯ ಮಾಹಿತಿಯನ್ನು ಹಂಚಿಕೊಳ್ಳಬೇಕಾಗುತ್ತೆ ಇದರಿಂದ ಬಳಕೆದಾರರ ಖಾಸಗಿತನಕ್ಕೆ ದಕ್ಕೆ ಆಗಲಿದೆ
>ಇದಕ್ಕಾಗಿ ವಾಟ್ಸಪ್ ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ಭೇದಿಸಬೇಕಾಗುತ್ತೆ >ಇದರಿಂದ ಬಳಕೆದಾರರ ಖಾಸಗಿ ಸಂದೇಶಗಳಿಗೆ ದಕ್ಕೆಯಾಗಲಿದೆ
>ಖಾಸಗಿತನ ಸಂರಕ್ಷಣೆ ವಿಚಾರದಲ್ಲಿ ವಾಟ್ಸಪ್ ಅಂತರಾಷ್ಟ್ರೀಯ ಹೋರಾಟಗಳಲ್ಲಿ ಕೈ ಜೋಡಿಸಿದೆ.
>ಕೆಲವು ಕಂಟೆಟ್ ಗಳನ್ನು ಸರ್ಕಾರದ ಸೂಚನೆ ಮೇರೆಗೆ ಭಾರತದಲ್ಲಿ ನಿಷೇಧ ಮಾಡಬಹುದು, ಆದರೆ ಬೇರೆ ದೇಶಗಳಲ್ಲಿ ಇದು ಮುಕ್ತವಾಗಿರಲಿದೆ. ಹೀಗಾಗಿ ಕೇಂದ್ರ ಸರ್ಕಾರ ಪರ್ಯಾಯ ಮಾರ್ಗಗಳನ್ನು ಹುಡುಕಬೇಕು ಎಂದು ತನ್ನ ಅರ್ಜಿಯಲ್ಲಿ ಹೇಳಿದೆ.
ಇನ್ನು ಇನ್ಸ್ಟಾಗ್ರಾಂ ಯೂಟ್ಯೂಬ್ ನಂತಹ ಪ್ಲಾಟ್ ಫಾರಂಗಳು ಗೊಂದಲದಲ್ಲಿದ್ದರೇ ಭಾರತಸ ಮೈಕ್ರೋ ಬ್ಲಾಗಿಂಗ್ ಆಪ್ ಕೂ ಕೇಂದ್ರದ ನಿಯಮಗಳನ್ನು ಒಪ್ಪಿಕೊಂಡಿದೆ.
ಸೋಶಿಯಲ್ ಮಿಡಿಯಾ ಸಂಸ್ಥೆಗಳಿಂದ ವ್ಯಕ್ತವಾಗಿರುವ ಭಿನ್ನ ಅಭಿಪ್ರಾಯಗಳಿಂದ ಕೇಂದ್ರ ಸರ್ಕಾರ ಕೂಡಾ ಈ ಸಂಸ್ಥೆಗಳ ಮೇಲೆ ಗರಂ ಆಗಿದೆ. ಅದರಲ್ಲೂ ವಿಶೇಷವಾಗಿ ಟ್ವಿಟರ್ ಮತ್ತು ವಾಟ್ಸಪ್ ವಿರುದ್ಧ ಕೆಂಡ ಕಾರುತ್ತಿದೆ. ತನ್ನ ನಿಲುವುಗಳ ಬಗ್ಗೆ ಕೇಂದ್ರದ ಅಭಿಪ್ರಾಯವೂ ಗಟ್ಟಿಯಾಗಿದೆ.

ಕೇಂದ್ರ ಸರ್ಕಾರ ತನ್ನ ಹೊಸ ನಿಯಮಗಳಿಗೆ ಬದ್ದವಾಗಿದೆ. ಈ ಬಗ್ಗೆ ಟ್ವಿಟರ್ ಗೆ ತೀವ್ರ ಬಿರುಸಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ, ಅತಿದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ವೈಯಕ್ತಿಕ ಸ್ವಾತಂತ್ರ್ಯ ಕಾಪಾಡುವ ಬಗ್ಗೆ ಹೇಳಿಕೊಡುವ ಅವಶ್ಯಕತೆ ಇಲ್ಲ, ಪೊದೆ ಸುತ್ತ ಸುತ್ತುವುದನ್ನು ನಿಲ್ಲಿಸಿ ಈ ದೇಶದ ನೆಲದ ಕಾನೂನು ಪಾಲಿಸಿ ಎಂದು ಹೇಳಿದೆ.
ಅಲ್ಲದೆ ವಾಟ್ಸಪ್ ಅರ್ಜಿಗೆ ದಿಲ್ಲಿ ಹೈಕೋರ್ಟ್ ಗೆ ಪ್ರತಿಕ್ರಿಯೆ ಸಲ್ಲಿಸಿರುವ ಸರ್ಕಾರ, ಸರ್ಕಾರ ದೇಶದ ಆತಂರಿಕ ಭದ್ರತೆ ಮತ್ತು ಶಾಂತಿ ಕಾಪಾಡುವ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಖಾಸಗಿತನಕ್ಕೆ ದಕ್ಕೆ ತರುವ ಯಾವುದೇ ಉದ್ದೇಶ ಸರ್ಕಾರ ಹೊಂದಿಲ್ಲ ಎಂದು ಹೇಳಿದೆ.
ಸದ್ಯಕ್ಕೆ ಈ ವಿವಾದ ತಣ್ಣಗಾಗುವ ಲಕ್ಷಣಗಳು ಕಂಡು ಬರ್ತಿಲ್ಲ ವಾಟ್ಸಪ್ ಕಾನೂನು ಹೋರಾಟಕ್ಕೆ ಇಳಿದಿರುವ ಕಾರಣ ಕೋರ್ಟ್ ಖಾಸಗಿತನದ ಬಗ್ಗೆ ಯಾವ ಅಭಿಪ್ರಾಯ ವ್ಯಕ್ತಪಡಿಸಲಿದೆ ಎಂದು ಕಾದು ನೋಡಬೇಕು. ಇದಕ್ಕೆ ಸ್ವಲ್ಪ ತೆಗೆದುಕೊಳ್ಳಲಿದೆ. ಹಾಗಂದ ಮಾತ್ರಕ್ಕೆ ದೇಶದಲ್ಲಿ ವಿವಾದ ಇತ್ಯರ್ಥ ಆಗುವ ವರೆಗೂ ಸೋಶಿಯಲ್ ಮಿಡಿಯಾ ಬ್ಯಾನ್ ಆಗಲಿದೆ ಎಂದು ಭಾವಿಸಬೇಡಿ. ಅದರ ಪಾಡಿಗೆ ಅದು ಎಂದಿನಂತೆ ನಡೆಯಲಿದ್ದು ಕೋರ್ಟ್ ಆದೇಶದ ಮೇಲೆ ಎಲ್ಲವೂ ಅವಲಂಬನೆ ಆಗಲಿದೆ. ಆದರೆ ಒಂದು ನೆನಪಿರಲಿ ಚೀನಾದ ಆ್ಯಪ್‌ಗಳನ್ನು ಬ್ಯಾನ್ ಮಾಡಿದಂತೆ. ಟ್ವಿಟರ್ ಫೇಸ್ಬುಕ್ ಟ್ವಿಟರ್ ಬ್ಯಾಕ್ ಮಾಡಲು ಸಾಧ್ಯವಿಲ್ಲ. ಕಾರಣ ದೇಶದ ಕೊಟ್ಟಾಂತರ ಜನರ ಬಳಕೆಯಲ್ಲಿದೆ.ಮತ್ತು ಅಭಿಪ್ರಾಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಇದೇ ಅಸ್ತ್ರ ಬಳಸಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ ಅನ್ನೊದು ಮರಿಯುವಂತಿಲ್ಲ