ನವದೆಹಲಿ : ದೇಶದಲ್ಲಿ ಹೊಸ ಐಟಿ ರೂಲ್ಸ್ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವ್ಯಾಟ್ಸಪ್ ಸಂಸ್ಥೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಕೇಂದ್ರದ ಆದೇಶಕ್ಕೆ ತಡೆ ನೀಡುವಂತೆ ಮನವಿ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಾಧ್ಯಮ ವಕ್ತಾರರು, ಕೇಂದ್ರ ಸರ್ಕಾರದ ಹೊಸ ಐಟಿ ನಿಯಮಗಳು ಬಳಕೆದಾರರ ಗೌಪ್ಯತೆಗೆ ಧಕ್ಕೆ ತರುತ್ತವೆ, ಬಳಕೆದಾರರ ಗೌಪ್ಯತೆಗೆ ಧಕ್ಕೆಯಾಗುವ ನಿಯಮಗಳನ್ನು ನಾವು ಒಪ್ಪಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
2021ರ ಫೆಬ್ರವರಿಯಲ್ಲಿ ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸೋಶಿಯಲ್ ಮಿಡಿಯಾಗಳಿಗಾಗಿ ಹೊಸ ಮಾರ್ಗಸೂಚಿಗಳನ್ನು ಹೊರ ತಂದಿತ್ತು.ಈ ಹೊಸ ಮಾರ್ಗಸೂಚಿ ಒಪ್ಪಿಕೊಳ್ಳಲು ಹಿಂದೆ 3 ತಿಂಗಳ ಸಮಯವನ್ನು ಕೇಂದ್ರ ಸರ್ಕಾರ ನೀಡಿತ್ತು.
ನಿನ್ನೆಗೆ ಈ ಸಮಯ ಅಂತ್ಯವಾಗಿದ್ದು ಈವರೆಗೂ ವ್ಯಾಟ್ಸಪ್, ಫೇಸ್ ಬುಕ್, ಟ್ವೀಟರ್ ಇನ್ಸ್ಟಾಗ್ರಾಂ ಕೇಂದ್ರದ ಹೊಸ ನಿಯಮಗಳನ್ನು ಒಪ್ಪಿಕೊಂಡಿಲ್ಲ. ಈ ಹಿನ್ನಲೆಯಲ್ಲಿ ಇಂದಿನಿಂದ ಸೋಶಿಯಲ್ ಮಿಡಿಯಾ ಬಂದ್ ಆಗಲಿದೆ ಎನ್ನಲಾಗಿತ್ತು.
ಆದರೆ ಈಗ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕಾನೂನು ಹೋರಾಟಕ್ಕೆ ವ್ಯಾಟ್ಸಪ್ ಮುಂದಾಗಿದ್ದು, ಬಾಕಿ ಸಂಸ್ಥೆಗಳು ಕಾನೂನು ಹೋರಾಟದ ಮೊರೆ ಹೋಗಲಿದೆ. ಹೀಗಾಗಿ ಕೇಂದ್ರ ಸರ್ಕಾರ ಮುಂದೇನು ಮಾಡಲಿದೆ ಕಾದು ನೋಡಬೇಕಿದೆ.