ಚಂಡೀಗಢ: ಬಿಜೆಪಿ ಮತ್ತು ಜೆಜೆಪಿ ಪಕ್ಷಗಳ ಜೊತೆ ಗುರುತಿಸಿಕೊಂಡಿರುವ ಕುಟುಂಬಗಳಿಗೆ ಮಕ್ಕಳ ಮದುವೆ ಮಾಡಿಕೊಡಲ್ಲ ಎಂದು ಹರಿಯಾಣ ರೈತರು ಘೋಷಣೆ ಮಾಡಿದ್ದಾರೆ. ಹರಿಯಾಣದಲ್ಲಿ ಬಿಜೆಪಿ-ಜೆಜೆಪಿ ಜೊತೆಯಾಗಿ ಸರ್ಕಾರ ರಚನೆ ಮಾಡಿವೆ.
ಜಿಂದ್ ಬಳಿಯ ಟೋಲ್ ಪ್ಲಾಜಾ ಸಮೀಪ ರೈತರು ಒಂದೆಡೆ ಸೇರಿ ಈ ನಿರ್ಣಯ ತೆಗೆದುಕೊಂಡಿದ್ದಾರೆ. ಈ ಎರಡೂ ಪಕ್ಷಗಳೊಂದಿಗೆ ಇರೋ ಕುಟುಂಬದಿಂದ ಹೆಣ್ಣು ತರಲ್ಲ ಮತ್ತು ಹೆಣ್ಣು ಕೊಡಲ್ಲ ಎಂದು ಹೇಳಿಕೊಂಡಿದ್ದಾರೆ. ಸಂಬಂಧ ಬೆಳೆಸುವ ಮುನ್ನವೇ ಕುಟುಂಬದ ರಾಜಕೀಯ ಹಿನ್ನೆಲೆ ತಿಳಿದುಕೊಳ್ಳುವಂತೆ ರೈತರಿಗೆ ಸಭೆಯಲ್ಲಿ ಹೇಳಲಾಗಿದೆ.
ಈ ಘೋಷಣೆಗೂ ಮೊದಲು ಹರಿಯಾಣದ ರೈತರು ತಮ್ಮ ಗ್ರಾಮಗಳಿಗೆ ಬಿಜೆಪಿ ಮತ್ತು ಜೆಜೆಪಿ ಜನಪ್ರತಿನಿಧಿಗಳು ಬರಕೂಡದು ಎಂದು ನಿಷೇಧ ವಿಧಿಸಿಕೊಂಡಿದ್ದಾರೆ. ಈ ಸಂಬಂಧ ಕೆಲ ಗಲಾಟೆಗಳು ನಡೆದಿರೊ ಬಗ್ಗೆ ವರದಿಯಾಗಿವೆ. ಕೆಲ ಗ್ರಾಮಗಳಲ್ಲಿ ಈ ಎರಡೂ ಪಕ್ಷಗಳೊಂದಿಗೆ ಇರೋ ಕುಟುಂಬಗಳೊಂದಿಗೆ ರೈತರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ.