ದೆಹಲಿ: ಕೊರೊನಾ ಎರಡನೇ ಅಲೆ ಉಪಟಳದಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿರುವ ಐಪಿಲ್ 2021ಆವೃತ್ತಿಯನ್ನು ದುಬೈನಲ್ಲಿ ಮುಂದುವರೆಸಲು ಬಿಸಿಸಿಐ ನಿರ್ಧರಿಸಿದೆ.
ಸೆಪ್ಟೆಂಬರ್ 18 ಅಥವಾ 19ರಿಂದ ಐಪಿಎಲ್ 14ನೇ ಆವೃತ್ತಿ ಪುನಾರಂಭಗೊಳ್ಳಲಿದ್ದು ಮೂರು ವಾರಗಳ ಕಾಲ ನಡೆಯಲಿರುವ ಆವೃತ್ತಿಯ ದ್ವಿತೀಯಾರ್ಧದಲ್ಲಿ 10 ಮುಖಾಮುಖಿ ಪಂದ್ಯಗಳನ್ನು ಆಯೋಜಿಸಲು ಚಿಂತಿಸಲಾಗಿದೆ ಎಂದು ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಮೂಲಕ ಅರ್ಧದಲ್ಲೇ ನಿಂತು ಕ್ರಿಕೆಟ್ ಪ್ರೇಮಿಗಳಿಗೆ ಉಂಟಾಗಿದ್ದ ನಿರಾಸೆಯನ್ನು ಶಮನ ಮಾಡಲು ಬಿಸಿಸಿಐ ಚಿಂತಿಸುತ್ತಿರುವುದು ದೃಢಪಟ್ಟಿದೆ.
ಈ ಸರಣಿಯ ಫೈನಲ್ ಪಂದ್ಯವನ್ನು ಅಕ್ಟೋಬರ್ 9 ಅಥವಾ 10ರಂದು ಆಡಿಸಲು ಬಿಸಿಸಿಐ ನಿರ್ಧರಿಸಿದೆ ಎಂಬುದು ಕೂಡಾ ಇದೇ ಸಂದರ್ಭದಲ್ಲಿ ಬಹಿರಂಗವಾಗಿದೆ. ಈ ಬಗ್ಗೆ ಬಿಸಿಸಿಐ ಈಗಾಗಲೇ ಎಲ್ಲಾ ಫ್ರಾಂಚೈಸಿಗಳೊಂದಿಗೆ ನಿರ್ಧರಿಸಿದ್ದು ಬಾಕಿ ಉಳಿದಿರುವ ಪಂದ್ಯಾವಳಿಗಳನ್ನು ಸೆಪ್ಟೆಂಬರ್ 18-20ರ ಆಸುಪಾಸಿನಲ್ಲಿ ಆರಂಭಿಸುವುದಾಗಿ ಮಾಹಿತಿ ರವಾನಿಸಿದೆ.