ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಆಕಾಶ ಇಂದು ಎಲ್ಲರಿಗೂ ಕೌತುಕದ ಕೇಂದ್ರ ಬಿಂದುವಾಗಿತ್ತು. ಇಂದು ಬೆಳಗ್ಗೆಯಿಂದಲೇ ಸೂರ್ಯನ ಸುತ್ತಲೂ ಕಾಮನ ಬಿಲ್ಲಿನ ರೀತಿಯಲ್ಲಿ ಉಂಗುರುವೊಂದು ಮೂಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.

ಇಂದು ಬೆಳಂ ಬೆಳಗ್ಗೆ ಬಾನಂಗಳದಲ್ಲಿ ಈ ವಿಸ್ಮಯ ಕಂಡ ಬೆಂಗಳೂರಿನ ಜನರು ಸಾಮಾಜಿಕ ಜಾಲತಾಣಗಳಲ್ಲಿ ಪೊಸ್ಟ್ ಹಾಕಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
Wow!!! Bengaluru 😍😍
— A K (@AK_Aspire) May 24, 2021
Just went outside for some reason and looked at Sun, I could not believe my eyes, It's like rainbow 🌈 covering round to the Sun 🌞. Its looking beautiful. 🥰🥰
Security guard said, it is like this from last 2 days#Bangalore pic.twitter.com/t086Ih0R2g
Ring round the sun . It's called Sun Halo !
— Ashwini M Sripad/ಅಶ್ವಿನಿ ಎಂ ಶ್ರೀಪಾದ್ (@AshwiniMS_TNIE) May 24, 2021
Bengaluru, check this out right now pic.twitter.com/m8o8WxmQUW
ಆಕಾಶದಲ್ಲಿನ ಈ ವಿದ್ಯಮಾನವನ್ನು 22-ಡಿಗ್ರಿ ಹಾಲೋಸ್ ಎಂದು ಕರೆಯಲಾಗುತ್ತದೆ. ಸೂರ್ಯ ಅಥವಾ ಚಂದ್ರನ ಸುತ್ತ ಇದು ಸುಮಾರು 22 ಡಿಗ್ರಿ ತ್ರಿಜ್ಯವನ್ನು ಹೊಂದಿರುತ್ತದೆ.

ಈ ವಿದ್ಯಮಾನವು ಐಸ್-ಸ್ಫಟಿಕ ಹಾಲೋಸ್ ಕುಟುಂಬಕ್ಕೆ ಸೇರಿದೆ. ಮೋಡಗಳಲ್ಲಿರುವ ಹಿಮದ ಹರಳುಗಳ ಮೂಲಕ ಸೂರ್ಯನ ಅಥವಾ ಚಂದ್ರನ ಕಿರಣಗಳು ವಕ್ರೀಭವನಗೊಂಡಾಗ ಹೀಗೆ ಸೂರ್ಯ ಅಥಾವ ಚಂದ್ರನ ಸುತ್ತ ಉಂಗುರು ಸೃಷ್ಟಿಯಾಗುತ್ತದೆ.
ಬೆಂಗಳೂರಿಗೆ ಇದು ಅಪರೂಪದ ವಿಸ್ಮಯ ಘಟನೆಯಾಗಿ ಕಂಡು ಬಂದರೂ, ಪ್ರಪಂಚದಾದ್ಯಂತ ನಿಯಮಿತವಾಗಿ ಕಂಡುಬರುವ ಸಾಮಾನ್ಯ ವಿದ್ಯಮಾನವಾಗಿದೆ.

ಶೀತವಲಯದ ದೇಶಗಳಲ್ಲಿ ಇದು ಹೆಚ್ಚು ಕಂಡು ಬರುತ್ತದೆ. ಭಾರತ ಉಷ್ಣವಲಯದ ದೇಶವಾಗಿರುವುದರಿಂದ ಇದು ಇಲ್ಲಿ ಅಪರೂಪ ಮತ್ತು ಅನಿರೀಕ್ಷಿತವಾಗಿದೆ.