ಮಧುರೈ : ಲಾಕ್ಡೌನ್ ಅವಧಿಯಲ್ಲಿ ಮದುವೆಗೆ ಪೊಲೀಸರು ಅಡ್ಡಿ ಮಾಡಬಹುದು ಎನ್ನುವ ಕಾರಣಕ್ಕೆ ವಿಶೇಷ ಚಾರ್ಟರ್ಡ್ ಪ್ಲೈಟ್‌ವೊಂದನ್ನು ಬುಕ್ ಮಾಡಿದ ಭೂಪ, ಹಾರುವ ವಿಮಾನದಲ್ಲಿ ತಾಳಿ ಕಟ್ಟಿ ವಿಶೇಷವಾಗಿ ಗೃಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾನೆ.

ಈ ಘಟನೆ ತಮಿಳುನಾಡಿನ ಮಧುರೈಯಲ್ಲಿ ನಡೆದಿದೆ. ನಿನ್ನೆ ಈ ವಿಶೇಷ ಮದುವೆ ನಡೆದಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಮಾಹಿತಿಗಳ ಪ್ರಕಾರ ನಿನ್ನೆ ಮಧುರೈಯಿಂದ ಚಾರ್ಟರ್ಡ್ ಪ್ಲೈಟ್ ಬುಕ್ ಮಾಡಲಾಗಿತ್ತು. ವಧು ವರರು ಸೇರಿದಂತೆ ವಿಶೇಷ ಅತಿಥಿಗಳು ಮತ್ತು ಕುಟುಂಬಸ್ಥರು ಈ ಪ್ಲೈಟ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ವಿಮಾನದ ಹಾರಾಟದ ಅವಧಿಯಲ್ಲಿ ಸಂಪ್ರದಾಯ ಬದ್ದವಾಗಿ ವಿಧಿ ವಿಧಾನಗಳನ್ನು ಪೂರೈಸಿ, ಬಂಧು ಬಾಂಧವರ ಸಮ್ಮುಖದಲ್ಲಿ ಯುವಕ ತಾಳಿ ಕಟ್ಟಿದ್ದಾನೆ.

ಈ ವಿಶೇಷ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನಾಗರಿಕ ವಿಮಾನಯಾನ ಪ್ರಾಧಿಕಾರ ಸ್ಪೈಸ್ ಜೆಟ್ ಸಂಸ್ಥೆಗೆ ನೋಟಿಸ್ ಜಾರಿ ಮಾಹಿತಿ ಕೋರಿದೆ. ಅಲ್ಲದೇ ಕೊರೊನಾ ನಿಯಮಗಳ ಉಲ್ಲಂಘನೆ ಅವಕಾಶ ನೀಡಿದಕ್ಕಾಗಿ, ಈ ಸಂಧರ್ಭದಲ್ಲಿ ವಿಮಾನದಲ್ಲಿದ್ದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದೆ.

ಇದಕ್ಕೆ ಸಂಬಂಧಿಸಿದೆ ಸ್ಪೈಸ್ ಜೆಟ್ ಪ್ರತಿಕ್ರಿಯೆ ನೀಡಿದ್ದು, ಸ್ಪೈಸ್ ಜೆಟ್ ಬೋಯಿಂಗ್ 737 ಅನ್ನು ಮಧುರೈನಲ್ಲಿ ಟ್ರಾವೆಲ್ ಏಜೆಂಟರ ಮೂಲಕ ಮೇ 23 ರಂದು ಬುಕ್ ಮಾಡಲಾಗಿತ್ತು. ಮದುವೆಯ ನಂತರದ ಜಾಲಿ ರೈಡ್ ಗಾಗಿ ವಿಮಾನ ಬುಕ್ ಮಾಡಲಾಗಿತ್ತು. ಈ ಸಂಧರ್ಭದಲ್ಲಿ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. ಮದುವೆಗೆ ಸ್ಪೈಸ್ ಜೆಟ್ ಅವಕಾಶ ನೀಡಿರಲಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ.
Despite repeated requests & reminders, the passengers didn't follow COVID guidelines & the airline is taking appropriate action as per rules:
— ANI (@ANI) May 24, 2021
SpiceJet
ನಿಯಮಗಳ ಉಲ್ಲಂಘನೆಯಾಗಿರುವ ಹಿನ್ನಲೆ ಪ್ರಯಾಣಿಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಲೈಸ್ ಜೆಟ್, ನಾಗರಿಕ ವಿಮಾನಯಾನ ಇಲಾಖೆಗೆ ತಿಳಿಸಿದೆ.