ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದರೂ ಸಾವಿನ ಪ್ರಮಾಣ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾರತ ಸದ್ಯ ಅಮೇರಿಕಾದ ದಾಖಲೆಯನ್ನು ಮುರಿದಿದೆ.
ಭಾರತದಲ್ಲಿ ಕಳೆದ 12 ದಿನದಲ್ಲಿ ಕೊರೋನಾಗೆ 50 ಸಾವಿರ ಜನ ಬಲಿಯಾಗುದ್ದು, ಒಟ್ಟು 26 ದಿನಗಳ ಅವಧಿಯಲ್ಲಿ 1 ಲಕ್ಷ ಜನ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಂಕಿ ಸಂಖ್ಯೆಗಳು ಮಾಹಿತಿ ನೀಡುತ್ತಿವೆ.

ಈ ದತ್ತಾಂಶದ ಪ್ರಕಾರ ಭಾರತ ಈಗ ಅಮೇರಿಕಾದ ಸಾವಿನ ದಾಖಲೆಯನ್ನು ಮುರಿದಿದೆ. ಅಮೇರಿಕಾದಲ್ಲಿ ಈ ಹಿಂದೆ 31 ದಿನಗಳಲ್ಲಿ 1 ಲಕ್ಷ ಜನ ಸಾವನ್ನಪ್ಪಿದರು. ಈಗ ಭಾರತದಲ್ಲಿ 26 ದಿನಗಳ ಅವಧಿಯಲ್ಲಿ 1 ಲಕ್ಷ ಜನ ಸಾವನ್ನಪ್ಪುವ ಮೂಲಕ ಭಾರತದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ.
ಜಾಗತಿಕ ಅಂಕಿ ಸಂಖ್ಯೆಗಳ ಪ್ರಕಾರ ಅತಿ ಹೆಚ್ಚು ಸಾವುಗಳು ವರದಿಯಾಗುತ್ತಿರುವ ದೇಶ ಭಾರತವಾಗಿದ್ದು ಸದ್ಯ ಒಟ್ಟು ಸಾವಿನ ಸಂಖ್ಯೆಯಲ್ಲಿ ಅಮೇರಿಕಾ ಮುಂದಿದ್ದು ಈವರೆಗೂ ಆರು ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಬ್ರೆಜಿಲ್ ನಲ್ಲಿ 4.5 ಲಕ್ಷ ಮಂದಿ ಸಾವನ್ನಪ್ಪಿದು ಎರಡನೇ ಸ್ಥಾನದಲ್ಲಿದೆ. 3 ಲಕ್ಷ ದಾಟಿದ ಭಾರತ ಈಗ ಮೂರನೇ ಸ್ಥಾನದಲ್ಲಿದೆ.

ಈ ನಡುವೆ ಸೋಂಕಿನ ಸಂಖ್ಯೆ ಮತ್ತಷ್ಟು ನಿಯಂತ್ರಣಕ್ಕೆ ಬಂದಿದ್ದು, ಕಳೆದ 24 ಗಂಟೆಯಲ್ಲಿ 2,22,315 ಮಂದಿಗೆ ಸೋಂಕು ತಗುಲಿದೆ. ಈಮೂಲಕ ದೇಶದ ಸೋಂಕಿತರ ಸಂಖ್ಯೆ 2,67,52,447ಕ್ಕೆ ಏರಿಕೆಯಾಗಿದೆ. ಈವರೆಗೂ 2,37,28,011ಮಂದಿ ಗುಣವಾಗಿದ್ದಾರೆ.
India reports 2,22,315 new #COVID19 cases, 3,02,544 discharges & 4,454 deaths in last 24 hrs, as per Health Ministry
— ANI (@ANI) May 24, 2021
Total cases: 2,67,52,447
Total discharges: 2,37,28,011
Death toll: 3,03,720
Active cases: 27,20,716
Total vaccination: 19,60,51,962 pic.twitter.com/hLqCFosYuw
ನಿನ್ನೆ ಒಂದೇ ದಿನ 4,454 ಮಂದಿ ಸಾವನ್ನಪ್ಪಿದು, ದೇಶದಲ್ಲಿ ಈವರೆಗೂ ಒಟ್ಟು 3,03,720 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 27,20,716 ಸಕ್ರಿಯ ಪ್ರಕರಣಗಳಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.