ನವದೆಹಲಿ : ಕಪ್ಪು ಬಿಳಿಯ ಬಳಿಕ ದೇಶದಲ್ಲಿ ಹಳದಿ ಫಂಗಸ್ ಪತ್ತೆಯಾಗಿದೆ. ದೆಹಲಿ ಎನ್‌ಸಿಆರ್‌ನ ಘಾಜೀಯಬಾದ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಹಳದಿ ಸೋಂಕು ಇರುವುದು ಧೃಡಪಟ್ಟಿದೆ ಎಂದು ವರದಿಯಾಗಿದೆ.
ಸೋಂಕು ಪತ್ತೆಯಾಗಿರುವ ಬಗ್ಗೆ ಇಎನ್‌ಟಿ ತಜ್ಞ ಡಾ. ಬ್ರಿಜ್ ಪಾಲ್ ತ್ಯಾಗಿ ಅಧಿಕೃತ ಮಾಹಿತಿ ನೀಡಿದ್ದಾರೆ. ಸಿಟಿ ಸ್ಕ್ಯಾನ್ ನಡೆಸಿದ ಸಂದರ್ಭದಲ್ಲಿ ಯಾವುದೇ ಲಕ್ಷಣಗಳು ಪತ್ತೆಯಾಗಲಿಲ್ಲ ಈ ಹಿನ್ನಲೆಯಲ್ಲಿ ಎಂಡೊಸ್ಕೊಪಿ ನಡೆಲಾಗಿತ್ತು, ಎಂಡೋಸ್ಕೊಪಿಯಲ್ಲಿ ಕಪ್ಪು ಬಿಳಿಯ ಜೊತೆಗೆ ಹಳದಿ ಸೋಂಕು ಇರುವುದು ದೃಢಪಟ್ಟಿದೆ. ಆದರೆ ಇದೇ ಮೊದಲ ಬಾರಿಗೆ ದೇಶದಲ್ಲಿ ಹಳದಿ ಫಂಗಸ್ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಇದೊಂದು ವಿಶೇಷ ಪ್ರಕರಣ ಎಂದಿರುವ ಡಾ. ಬ್ರಿಜ್ ಪಾಲ್ ತ್ಯಾಗಿ, ಒಬ್ಬ ರೋಗಿಯಲ್ಲಿ ಮೂರು ರೀತಿಯ ಫಂಗಸ್ ಪತ್ತೆಯಾಗಿದೆ. ಅಲ್ಲದೇ ಮನುಷ್ಯದ ದೇಹದಲ್ಲಿ ಹಳದಿ ಫಂಗಸ್ ಪತ್ತೆಯಾಗಿರುವುದು ಇದೇ ಮೊದಲು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಳದಿ ಫಂಗಸ್ ಸಾಮಾನ್ಯವಾಗಿ ಸರೀಸೃಪಗಳಲ್ಲಿ ಕಂಡು ಬರುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಕಪ್ಪು ಮತ್ತು ಬಿಳಿಗಿಂತ ಹಳದಿ ಅಪಾಯಕಾರಿ ಎನ್ನಲಾಗಿದ್ದು, ಆಲಸ್ಯ, ತೂಕ ಇಳಿಕೆ, ಕಡಿಮೆ ಹಸಿವು ಅಥವಾ ಹಸಿವು ಇಲ್ಲದಿರುವುದು, ಗಾಳಗಳಲ್ಲಿ ಕೀವು ಸೋರಿಕೆಯಾಗುವ ಲಕ್ಷಣಗಳು ಕಂಡು ಬರಲಿದೆಯಂತೆ.

ದೇಹದಲ್ಲಿ ಆತಂಕರಿಕವಾಗಿ ಹೆಚ್ಚು ಹರಡಲಿರುವ ಹಳದಿ ಫಂಗಸ್, ಮುಖ್ಯವಾಗಿ ಕಣ್ಣು ಉಗುರು ಸೇರಿ ದೇಹದ ಬಹುತೇಕ ಭಾಗಗಳಿಗೂ ಡ್ಯಾಮೇಜ್ ಮಾಡಬಲ್ಲದು ಶಕ್ತ ಹೊಂದಿದೆ ಎಂದು ಡಾ. ಬ್ರಿಜ್ ಪಾಲ್ ತ್ಯಾಗಿ ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಮನೆಯ ಸುತ್ತಲೂ ಉತ್ತಮ ನೈರ್ಮಲ್ಯದಿಂದ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಸದ್ಯ ಪತ್ತೆಯಾಗಿರುವ ಹಳದಿ ಫಂಗಸ್ ರೋಗಿಗೆ ಚಿಕಿತ್ಸೆ ಮುಂದುವರಿದಿದ್ದು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳ ಹೇಳಿವೆ. ಆದರೆ ಕಪ್ಪು ಬಿಳಿಯ ಬಳಿಕ ಹಳದಿ ಫಂಗಸ್ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.